Publish Date: Wed, 28 Jun 2023 (15:50 IST)
Updated Date: Wed, 28 Jun 2023 (15:13 IST)
ನಮ್ಮ ಮೆಟ್ರೂ ಎರಡನೇ ಹಂತದ ಯೋಜನೆಯಡಿ ಹಳಿಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೇಂದ್ರ ಇಂಧನ ಸಚಿವಾಲಯದ RECL ಕಂಪನಿ 3,045 ಕೋಟಿ ನೆರವು ನೀಡಲು ನಿರ್ಧರಿಸಿದೆ. ಬೆಂಗಳೂರು ನಗರ ವಾಸಿಗಳ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ನಮ್ಮ ಮೆಟ್ರೋವನ್ನ 115 ಕಿ.ಮೀಗೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಲ್ಲಿಸಿದ್ದ 3,045 ಕೋಟಿ ಪ್ರಸ್ತಾವಕ್ಕೆ ಶನಿವಾರ ನಡೆದ RECL ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.