Select Your Language

Notifications

webdunia
webdunia
webdunia
webdunia

ಸೋರುತಿಹುದು ಮನೆಯ ಮಾಳಿಗೆ ಅನ್ನೋ ಪರಿಸ್ಥಿತಿಯಲ್ಲಿ ನಮ್ಮ ಮೆಟ್ರೋ

ಸೋರುತಿಹುದು ಮನೆಯ ಮಾಳಿಗೆ ಅನ್ನೋ ಪರಿಸ್ಥಿತಿಯಲ್ಲಿ ನಮ್ಮ ಮೆಟ್ರೋ
bangalore , ಶುಕ್ರವಾರ, 2 ಜೂನ್ 2023 (20:06 IST)
ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಮಳೆ ನೀರು ಸೋರುತ್ತಿದೆ.ಇದೇನಾ ರಾಜ್ಯದ ಮಾಡೆಲ್ ಮೆಟ್ರೋ ಸ್ಟೇಷನ್ ಅಂತಾ  ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಹೊಸದಾಗಿ ಉದ್ಘಾಟನೆಗೊಂಡ ವೈಟ್ ಫೀಲ್ಡ್ ನಾ ಕಾಡುಗೋಡಿ ಮೆಟ್ರೋ ಹಣೆಬರಹವಾಗಿದೆ.ಟ್ವಿಟರ್ ನಲ್ಲಿ ಮೆಟ್ರೊ ಕಾಮಗಾರಿಯನ್ನ  ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಮೆಟ್ರೋ ನಿಲ್ದಾಣದ ಮೇಲ್ಛಾವಣಿಯಿಂದ ನೆಲದ ಮೇಲೆ ಮಳೆ ನೀರು ಬೀಳುವ ವಿಡಿಯೋ ಫುಲ್ ವೈರೆಲ್  ಆಗಿದೆ.ಮಳೆಯಿಂದ ವೈಟ್‌ಫೀಲ್ಡ್ ಕಾಡುಗೋಡಿ ನಿಲ್ದಾಣದ ಒಳಗೆ ಮಳೆ ನೀರಿ ಸೋರುತ್ತಿದೆ. ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿ ಬಂದು ಉದ್ಘಾಟನೆ ಮಾಡಿ ಹೋಗಿದ್ದು,ಈಗ ಕಳಪೆ ಮೆಟ್ರೋ ಕಾಮಗಾರಿ  ಮಾಡಲಾಗಿದೆ ಅಂತ ಜನರು ಕಿಡಿಕಾರಿದ್ದಾರೆ.ಈಗಲೇ ಹೀಗಾದ್ರೆ ಮುಂಗಾರು ಆರಂಭ ಆದ ಮೇಲೆ ಸಿಲಿಕಾನ್ ಸಿಟಿ ಜನರಿಗೆ ಸೇಫ್ಟಿ ಇದ್ಯಾ ಅಂತ ಪ್ರಶ್ನೆ ಮಾಡಿದ್ದಾರೆ.ಈ ಬಾರಿಯೂ ಮಳೆಯಿಂದ ರಾಷ್ಟ್ರ ಮಟ್ಟದಲ್ಲಿ ಸಿಲಿಕಾನ್ ಸಿಟಿ ಮಾನ ಮರ್ಯಾದೆ ಹರಾಜು ಫಿಕ್ಸ್ ಅಂತಾ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೀಣ್ಯ ಪ್ಲೈವೋರ್ ಮೇಲೆ ಕೇಬಲ್ ಅಳವಡಿಕೆ ಶುರು