Select Your Language

Notifications

webdunia
webdunia
webdunia
webdunia

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬಾರದು

2A reservation should not be made to the Panchamasaali society
bangalore , ಶುಕ್ರವಾರ, 20 ಆಗಸ್ಟ್ 2021 (20:01 IST)
ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬಾರದು ಎಂದು ಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿಕೆ ಖಂಡಿಸಿ ಗದಗನಲ್ಲಿ ಪ್ರತಿಭಟನೆ ಮಾಡಿದರು. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪಂಚಮಸಾಲಿ ಯುವ ಘಟಕ ಹಾಗೂ ಪಂಚಸೇನೆಯಿಂದ ಪ್ರತಿಭಟಿಸಿದರು. ಮುಖ್ಯಮಂತ್ರಿ ಚಂದ್ರು ಭಾವಚಿತ್ರಕ್ಕೆ ಚಪ್ಪಲಿ ಸೇವೆಮಾಡಿ, ನಂತರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಚಂದ್ರು ಅವರ ಹೇಳಿಕೆ ಹಾಗೂ ಪತ್ರವನ್ನು ಸರ್ಕಾರ ಪರಿಗಣಿಸಬಾರದು. ಶೀಘ್ರದಲ್ಲೇ ಮೀಸಲಾತಿ ಆದೇಶ ನೀಡಬೇಕೆಂದು ಆಗ್ರಹಿಸಿದರು. ಮೀಸಲಾತಿ ನೀಡದೆಯೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುವುದಾಗಿ ಪಂಚಸೇನೆಯಿಂದ ಸರ್ಕಾರಕ್ಕೆ  ಎಚ್ಚರಿಕೆ ನೀಡಿದರು. ಈ ಹೋರಾಟದಲ್ಲಿ ಗದಗ‌ ಜಿಲ್ಲೆಯ ಸಮಾಜದ ಅನೇಕ ಮುಖಂಡರು ಭಾಗಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಯೋತ್ಪಾದಕ ಚಟುವಟಿಕೆ ಮೇಲೆ ನಿಗಾ ವಹಿಸಲು ಸೂಚನೆ: ಅರಗ ಜ್ಞಾನೇಂದ್ರ