Select Your Language

Notifications

webdunia
webdunia
webdunia
webdunia

ಖುಷಿಯಾದಾಗ ಗಾಳಿ ಗುಂಡು ಹಾರಿಸೋದು ಸಂಪ್ರದಾಯ: ಗೃಹ ಸಚಿವ ಅರಗ ಜ್ಞಾನೇಂದ್ರ

webdunia
benagluru , ಶುಕ್ರವಾರ, 20 ಆಗಸ್ಟ್ 2021 (16:18 IST)
ಮಲೆನಾಡು ಭಾಗದಲ್ಲಿ ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಯಾರಾದರೂ ತೀರಿ ಹೋದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಕೊಡಗು ಮಲೆನಾಡು ಭಾಗದಲ್ಲಿ ಇಂತಹ ಸಂಪ್ರದಾಯ ಇದೆ ಎಂದು ಹೇಳುವ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂ
ಡು ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ಅಸಮಾಧಾನ ವ್ಯಕ್ತವಾಗಿದೆ.
ಇನ್ನೂ ಕೆಲವೆಡೆ ಇಂತಹ ಸಂಪ್ರದಾಯಗಳು ಇರಬಹುದು. ಭಗವಂತ್ ಖೂಬಾ ಬಂದ ಸಂದರ್ಭದಲ್ಲೂ ಖುಷಿಗೆ ಗಾಳಿಯಲ್ಲಿ ಗುಂಡು ಹಾರಾಟ ಮಾಡಿರಬಹುದು. ಆದರೆ ಇದು ಸಾರ್ವಜನಿಕವಾಗಿ ಮಾಡಿದ್ದು ತಪ್ಪು. ಇದರಿಂದ ಯಾರಿಗಾದೂ ತಾಗಿ ಅನಾಹುತವಾಗಬಹುದು. ಈ ಬಗ್ಗೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಹೋರಾಟಗಾರ ಸಿ.ಎಸ್.ದ್ವಾರಕನಾಥ್ ಕಾಂಗ್ರೆಸ್ ಸೇರ್ಪಡೆ