ಅರಣ್ಯ ಸಚಿವ ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಿ ಅರಣ್ಯ ನಿಯಮಗಳನ್ನು ಉಲ್ಲಂಘನೆ ಮಾಡಿ 23 ಕೋಟಿ, 20 ಲಕ್ಷದ 88 ಸಾವಿರದ 469 ರೂ.ಗಳ ಸಂಪತ್ತು ಲೂಟಿಮಾಡಲಾಗಿದೆ.
ಹೀಗೆ ಲೂಟಿ ಮಾಡೋ ಮೂಲಕ ಸರಕಾರಕ್ಕೆ ವಂಚನೆ ಮಾಡಿದ್ದಾರೆಂದು ಲೋಕಾಯುಕ್ತ ವಿಶೇಷ ತನಿಖಾ ತಂಡವೇ ಚಾರ್ಜ್ ಶೀಟ್ ಸಲ್ಲಿಸಿದೆಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಬಿಜೆಪಿಯವರೇ ಮಾತನಾಡಬೇಕಾದರೆ ಬದ್ಧತೆ ಇಟ್ಡುಕೊಳ್ಳಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೀವು ಕುರಿ ಕಾಯಲು ಸಿಂಗ್ ರಂತಹ ತೋಳವನ್ನು ನೇಮಿಸಿದ್ದೀರಿ. ಇದು ಸರಿಯೇ ಬಿಜೆಪಿಯವರೇ ಉತ್ತರಿಸಿ ಎಂದರು.
ನಾವು ಸಹ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದೇವು. ಆದರೆ ಅವರಿಗೆ ಅಧಿಕಾರ ನೀಡಿರಲಿಲ್ಲ. ಮಹರ್ಷಿ ವಾಲ್ಮೀಕಿ ರೀತಿ ನಾನು ತಿದ್ದಿಕೊಳ್ಳುವೆ ಎಂದು ಸಿಂಗ್ ಹೇಳುತ್ತಿದ್ದಾರೆ. ವಾಲ್ಮೀಕಿ ಕಳ್ಳ ಆಗಿರಲಿಲ್ಲ. ವಾಲ್ಮೀಕಿ ಕಳ್ಳ ಎಂದು ಸಾಬೀತು ಮಾಡಲು ಯಾರಾದರೂ ಮುಂದೆ ಬನ್ನಿ ಅದಕ್ಕೆ ನನ್ನ ಮುಕ್ತ ಪಂಥಾಹ್ವಾನ ಇದೆ ಎಂದರು.
ವಾಲ್ಮಿಕಿ ಜೊತೆ ಸಮೀಕರಣ ಮಾಡಿಲೊಳ್ಳುವುದನ್ನು ಸಿಂಗ್ ಬಿಡಬೇಕು ಎಂದು ಎಚ್ಚರಿಸಿದರು.