ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ವಾಯುಪಡೆಯ ವಿಶೇಷ ವಿಮಾನದ ಮೂಲಕ 210 ಭಾರತೀಯರನ್ನು ದೆಹಲಿಗೆ ಕರೆತರಲಾಯಿತು.
ದೆಹಲಿಯ ಹಿಂದನ್ ಏರ್ ಬೇಸ್ ಗೆ ವಿಮಾನ ಆಗಮಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ 210 ಜನರು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ.
ಉಕ್ರೇನ್ ನ ನೆರೆ ರಾಷ್ಟ್ರ ರೊಮೇನಿಯಾದಿಂದ ಹೊರಟ ವಿಮಾನ ಇಂದು ಮುಂಜಾನೆ 5 ಗಂಟೆಗೆ ದೆಹಲಿ ತಲುಪಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
ಶನಿವಾರ ಒಂದೇ ದಿನ ಸುಮಾರು 3 ಸಾವಿರ ಭಾರತೀಯರನ್ನು 15 ವಿಮಾನಗಳ ಮೂಲಕ ಕರೆತರಲಾಗಿದೆ. ಇದರಲ್ಲಿ 3 ವಾಯುಪಡೆ ವಿಮಾನಗಳನ್ನು ನಿಯೋಜಿಸಲಾಗಿತ್ತು.