Webdunia - Bharat's app for daily news and videos

Install App

Mangaluru: ದಕ್ಷಿಣ ಕನ್ನಡ ಜಿಲ್ಲೆಯಿಂದ 21 ಹಿಂದೂ ನಾಯಕರು, 15 ಮುಸ್ಲಿಂ ನಾಯಕರು ಗಡೀಪಾರು

Krishnaveni K
ಮಂಗಳವಾರ, 3 ಜೂನ್ 2025 (09:12 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಆರೋಪದಲ್ಲಿ 21 ಹಿಂದೂ ನಾಯಕರನ್ನು ಮತ್ತು 15 ಮುಸ್ಲಿಂ ನಾಯಕರನ್ನು ಗಡೀಪಾರು ಮಾಡಲು ಸರ್ಕಾರ ನೋಟಿಸ್ ನೀಡಿದೆ. ಆದರೆ ಇದಕ್ಕೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬೆಳ್ಳಾರೆ, ಪುತ್ತೂರು ಸೇರಿದಂತೆ ವಿವಿಧ ಭಾಗದ ಹಲವು ಹಿಂದೂ ನಾಯಕರಿಗೆ ಗಡೀಪಾರು ನೋಟಿಸ್ ನೀಡಲಾಗಿದೆ. ಇವರಲ್ಲಿ ಈ ಹಿಂದೆ ಲೋಕಸಭೆಗೆ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ, ಹಿಂದೂ ಸಂಘಟನೆ ನಾಯಕ ಭರತ್ ಕುಮ್ಟೇಲು ಸೇರಿದ್ದಾರೆ.

ಇನ್ನು ಮುಸ್ಲಿಮ್ ನಾಯಕರಿಗೂ ಸರ್ಕಾರ ನೋಟಿಸ್ ನೀಡಿದೆ. ಆದರೆ ಹಿಂದೂ ನಾಯಕರಿಗೆ ಹೋಲಿಸಿದರೆ ಮುಸ್ಲಿಂ ನಾಯಕರ ಸಂಖ್ಯೆ ಕಡಿಮೆ. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೇಕೆಂದೇ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಗಡೀಪಾರು ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್ ಕುಮಾರ್ ಪುತ್ತಿಲ, ಯಾವುದೇ ಕಾರಣಕ್ಕೂ ನೋಟಿಸ್ ಸ್ವೀಕರಿಸಲ್ಲ. ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ನಾವು ಯಾವುದೇ ಕೊಲೆ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ಗಡೀಪಾರು ಯಾಕೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮುಂದಿನ ಸುದ್ದಿ
Show comments