Publish Date: Fri, 22 Feb 2019 (08:32 IST)
Updated Date: Fri, 22 Feb 2019 (08:34 IST)
ಬೆಂಗಳೂರು : ಕರ್ನಾಟಕದಲ್ಲಿ ಎರಡೂವರೆ ಸಿಎಂಗಳು ಅಧಿಕಾರದಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,’ ಇಲ್ಲಿ ಸಿಎಂ ಕುಮಾರಸ್ವಾಮಿ ಅವರು ಗುಮಾಸ್ತ ಅಂತಾರೆ, ಸಿದ್ದರಾಮಯ್ಯ ಸೂಪರ್ ಸಿಎಂ, ಪರಮೇಶ್ವರ್ ಅರ್ಧ ಸಿಎಂ ಅಂತಾರೆ. ಒಟ್ಟಾರೆ ಕರ್ನಾಟಕದಲ್ಲಿ ಎರಡೂವರೆ ಸಿಎಂಗಳು ಅಧಿಕಾರದಲ್ಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
‘ರಾಜ್ಯದಲ್ಲಿ ಸರ್ಕಾರದ ರಚಿಸಿದ ವೇಳೆ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಸಿಎಂ ಹೇಳಿದ್ದರು. ಆದರೆ ಇದುವರೆಗೂ ಭರವಸೆ ನೀಡಿದ್ದ ಸಂಪೂರ್ಣ ಸಾಲಮನ್ನಾ ಆಗಿಲ್ಲ. ಆದರೆ ನಮ್ಮನ್ನು ಸಾಲಮನ್ನಾ ಮಾಡಿ ಎಂದು ಹೇಳುತ್ತಾರೆ. ಮೊದಲು ರಾಜ್ಯದಲ್ಲಿ ಸಾಲಮನ್ನಾ ಮಾಡಿ ಮಾತಾಡಿ ‘ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.