Select Your Language

Notifications

webdunia
webdunia
webdunia
webdunia

2,690 ಕೋಟಿ ರೂ. ಮೌಲ್ಯದ 81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ

2,690 ಕೋಟಿ ರೂ. ಮೌಲ್ಯದ 81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ
bangalore , ಶುಕ್ರವಾರ, 17 ಜೂನ್ 2022 (14:34 IST)
ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ  ಮತ್ತಷ್ಟು ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಗೆ ಒತ್ತು  ನೀಡಿರುವ  ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಸುಮಾರು 6,825ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುವ 2,689.51 ಕೋಟಿ ರೂ. ಮೌಲ್ಯದ 81 ಕೈಗಾರಿಕಾ ಯೋಜನೆಗಳಿಗೆ ಗುರುವಾರ ಸಂಜೆ ಅನುಮೋದನೆ ನೀಡಿದೆ.
ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ  ನೇತೃತ್ವದಲ್ಲಿ ನಡೆದ 132ನೇ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ (ಎಸ್ಎಲ್ಎಸ್ಡಬ್ಲ್ಯುಸಿಸಿ) ಸಭೆಯು ಈ ಯೋಜನೆಗಳಿಗೆ ಅನುಮೋದನೆ ನೀಡಿದೆ.
 ಸಮಿತಿಯು 50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ. 1,229.43 ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 1,734 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ  ಮುರುಗೇಶ್ ನಿರಾಣಿ ತಿಳಿಸಿದ್ದಾರೆ. 
ಅಲ್ಲದೆ 132ನೇ ಎಸ್ಎಲ್ಎಸ್ಡಬ್ಲ್ಯುಸಿಸಿ ಸಭೆಯಲ್ಲಿ 15 ಕೋಟಿ ರೂ.ಗಿಂತ ಹೆಚ್ಚು ಹಾಗೂ 50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 71 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಹಾಗೂ 1,308.06 ಕೋಟಿ ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 5,091 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
151.42 ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2,689.51 ಕೋಟಿ ರೂ.ಗಳ ಹೂಡಿಕೆಯೊಂದಿಗೆ 6,825 ಜನರಿಗೆ ಉದ್ಯೋಗಾವಕಾಶವಿರುವ ಒಟ್ಟು 81 ಯೋಜನೆಗಳಿಗೆ ಅನುಮತಿ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಗಲಕೋಟೆ ಆರ್.ಟಿ.ಓ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ