ರೈತನ ಪತ್ನಿ ಸಿಪ್ಪೆಯನ್ನು ಎಮ್ಮೆಗೆ ತಿನ್ನಲು ಹಾಕುತ್ತಿದ್ದಾಗ ಆಕಸ್ಮಿಕವಾಗಿ ಸುಮಾರು 35 ಗ್ರಾಂ ₹2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ತುಂಡಾಗಿ ಬಿದ್ದಿದೆ. ಇದೇ ವೇಳೆ ಚಿನ್ನದ ಸರವನ್ನು ಎಮ್ಮೆ ನುಂಗಿ ಬಿಟ್ಟಿದ್ದು, ಚಿನ್ನದ ಸರಕ್ಕಾಗಿ ಎಮ್ಮೆಯ ಹೊಟ್ಟೆಯನ್ನೇ ಕೊಯ್ದ ಘಟನೆಯೊಂದು ಮಹಾರಾಷ್ಟ್ರದ ಮಂಗ್ರುಲ್ಪಿರ್ ನಲ್ಲಿರುವ ಸರ್ಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಸರವನ್ನು ಎಮ್ಮೆ ತಿಂದಿದೆ ಎಂದು ಭಾವಿಸಿ ವೈದ್ಯರ ನೆರವಿಂದ ಸ್ಕ್ಯಾನ್ ಮಾಡಿಸಿದಾಗ ಸರ ಎಮ್ಮೆ ಹೊಟ್ಟೆಯಲ್ಲಿರುವುದು ಕಂಡು ಬಂದಿದ್ದೆ.ನಂತರ ಎಮ್ಮೆಯ ಹೊಟ್ಟೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಚಿನ್ನದ ಸರವನ್ನು ಹೊರತೆಗೆಯಲಾಗಿದ್ದು,ಎಮ್ಮೆಯು ಸಂಪೂರ್ಣ ಗುಣಮುಖವಾಗೋವರೆಗೂ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.