ನಿಗೂಢ ಕಾಯಿಲೆ ಅಥವಾ ವೈರಲ್ ಫೀವರ್ ನಿಂದ ಅಸ್ವಸ್ಥಗೊಂಡಿರುವ ಸುಮಾರು 171 ಮಕ್ಕಳು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮೋತಿಲಾಲ್ ನೆಹರು ಆಸ್ಙತ್ರೆಗೆ ದಾಖಲಿಸಲಾಗಿದೆ.
ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ 120 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, 171 ಮಕ್ಕಳನ್ನು ದಾಖಲಿಸಲಾಗಿದೆ. ಕೆಲವೊಂದು ಹಾಸಿಗೆಯಲ್ಲಿ ಇಬ್ಬರು ಮಕ್ಕಳನ್ನು ಹಾಕಲಾಗಿದೆ. ಕೆಲವು ಮಕ್ಕಳಿಗೆ ಆಕ್ಸಿಜನ್ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಿಢೀರನೆ ಮಕ್ಕಳಲ್ಲಿ ಈ ರೀತಿ ಸೋಂಕು ಕಾಣಿಸಿಕೊಂ
ಡಿರುವ ಬಗ್ಗೆ ಕಾರಣ ತಿಳಿದು ಬಂದಿಲ್ಲ. 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.