Publish Date: Fri, 27 Sep 2019 (17:44 IST)
Updated Date: Fri, 27 Sep 2019 (17:46 IST)
ಗೋಹತ್ಯೆ ನಿಷೇಧ ಮಾಡುವಂತೆ ಶ್ರೀ ರಾಮ ಸೇನೆಯಿಂದ ಪ್ರತಿಭಟನೆ ನಡೆಸಲಾಗಿದ್ದು, ಸರಕಾರಕ್ಕೆ ಗಡುವು ನೀಡಲಾಗಿದೆ.
ದಾವಣಗೆರೆಯ ಶ್ರೀರಾಮ ಸೇನೆ ಘಟಕದಿಂದ ಪ್ರತಿಭಟನೆಯು ನಗರದ ಜಯದೇವ ಸರ್ಕಲ್‌ನಲ್ಲಿ ನಡೆಯಿತು.
15 ದಿನದೊಳಗೆ ಗೋಹತ್ಯೆಯನ್ನು ನಿಷೇಧ ಮಾಡಬೇಕು. ಇಲ್ಲವಾದರೇ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಜಯದೇವ ಸರ್ಕಲ್ ನಿಂದ ಎಸಿ ಕಚೇರಿ ವರೆಗೂ ರ್ಯಾಲಿ ನಡೆಸಿ, ಎಸಿ ಯವರಿಗೆ ಮನವಿ ಸಲ್ಲಿಸಿದರು ಪ್ರತಿಭಟನಾಕಾರರು.