Daily Horoscope
✕

ಸೇನೆಯಿಂದ 14 ಮಂದಿ ಹತ್ಯೆ; ಎಎಫ್‌ಎಸ್ ಪಿಎ ರದ್ದತಿಗೆ ನಾಗಾಲ್ಯಾಂಡ್ ಸಿಎಂ ಆಗ್ರಹ.

Webdunia
ಮಂಗಳವಾರ, 7 ಡಿಸೆಂಬರ್ 2021 (20:14 IST)
ಕೊಹಿಮಾ: ನಾಗಾಲ್ಯಾಂಡ್ ನಲ್ಲಿ ಭಾರತೀಯ ಸೇನೆ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನಡೆಸಬೇಕಿದ್ದ ದಾಳಿಯಲ್ಲಿ ಸಾವನ್ನಪ್ಪಿದ್ದ 14 ಮಂದಿ ಗಣಿ ಕಾರ್ಮಿಕರ ಅಂತ್ಯ ಸಂಸ್ಕಾರ ನಡೆದಿದ್ದು ರಾಜ್ಯದಲ್ಲಿ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು (ಎಎಫ್‌ಎಸ್ ಪಿಎ) ರದ್ದುಗೊಳಿಸಬೇಕೆಂದು ಸಿಎಂ ನಿಫಿಯು ರಿಯೊ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ, 1958 ಜಾರಿಯಲ್ಲಿದೆ. ರಾಜ್ಯಕ್ಕೂ ವಿಶೇಷ ಸ್ಥಾನಮಾನಗಳಿವೆ. ಎಎಫ್‌ಎಸ್ ಪಿಎ ಯನ್ನು ಜಾರಿಗೊಳಿಸುವುದು ಹಾಗೂ ರದ್ದುಗೊಳಿಸುವ ವಿಷಯವಾಗಿ ಚರ್ಚೆಗಳು ನಡೆಯಬೇಕು ಎಂದು ಕಾರ್ಮಿಕರ ಅಂತ್ಯಕ್ರಿಯೆಯ ವೇಳೆ ನಾಗಾಲ್ಯಾಂಡ್ ಸಿಎಂ ಹೇಳಿದ್ದಾರೆ.
ನಾಗಾಲ್ಯಾಂಡ್ ಗೆ ಸಂವಿಧಾನದ ಆರ್ಟಿಕಲ್ 371 (A) ವಿಶೇಷ ಸ್ಥಾನಮಾನ ನೀಡಿದ್ದು, ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯುವವರೆಗೆ ಸಂಸತ್ ನ ಯಾವುದೇ ಕಾಯ್ದೆಗಳೂ ರಾಜ್ಯಕ್ಕೆ ಅನ್ವಯವಾಗುವುದಿಲ್ಲ.
ನಾಗಾಲ್ಯಾಂಡ್ ಹಾಗೂ ನಾಗ ಮಂದಿ ಎಂದಿಗೂ ಎಎಫ್‌ಎಸ್ ಪಿಎಯನ್ನು ವಿರೋಧಿಸುತ್ತಿದ್ದಾರೆ. ಅದನ್ನು ರದ್ದುಗೊಳಿಸಬೇಕು, 14 ಮಂದಿ ಗಣಿ ಕಾರ್ಮಿಕರ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ. ನಾವು ಈ ವಿಷಯವಾಗಿ ಒಗ್ಗಟ್ಟಿನಿಂದ ಇದ್ದೇವೆ ಎಂದು ನಿಫಿಯು ರಿಯೊ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದ ಪೊಲೀಸರಿಗೆ ಚಾಲೆಂಜ್ ಮಾಡಿದ ಪ್ರತಾಪ್ ಸಿಂಹ ಪೇಟೆ ರೌಡಿ ಎಂದ ಪ್ರಿಯಾಂಕ್ ಖರ್ಗೆ

Karnataka Weather: ಬೇಸಿಗೆಯಂಥಾ ಬಿಸಿಲಿನಿಂದ ಬೇಸತ್ತಿದ್ದೀರಾ, ರಾಜ್ಯದಲ್ಲಿ ಮಳೆ ಯಾವಾಗ ಇಲ್ಲಿದೆ ಉತ್ತರ

BRICS: ಪ್ರಧಾನಿ ಮೋದಿ ಶೇಕ್ ಹ್ಯಾಂಡ್ ಮಾಡುತ್ತಲೇ ಅಜಿತ್ ದೋವಲ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ಮಾಡಿದ ಸನ್ನೆ ಭಾರೀ ವೈರಲ್ Video

ವಂದೇ ಮಾತರಂಗಾಗಿ ಪಾದಯಾತ್ರೆ ಮಾಡಲು ಹೊರಟ ಬಿಜೆಪಿ

ಗಣೇಶೋತ್ಸವ ಮಸೀದಿ ರಸ್ತೆಯಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ ಎಂದ ಇನ್ಸ್ ಪೆಕ್ಟರ್ ಧನಂಜಯ್: ಠಾಣೆಗೆ ನುಗ್ಗುತ್ತೇವೆ ಎಂದ ಪ್ರತಾಪ್ ಸಿಂಹ

ಮುಂದಿನ ಸುದ್ದಿ
Show comments