Publish Date: Fri, 27 Aug 2021 (20:37 IST)
Updated Date: Fri, 27 Aug 2021 (20:42 IST)
ಮೆದುಳಿನ ರಕ್ತಸ್ರಾವದಿಂದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ. ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಸೋಮನಾಥ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಅಪೇಕ್ಷಾ ಮೃತ ಬಾಲಕಿ. ಅಪೇಕ್ಷಾ ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದಳು. ಇಂದು ಬೆಳಿಗ್ಗೆ ಅಪೇಕ್ಷಾಳಿಗೆ ವಿಪರೀತವಾಗಿ ತಲೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.