Select Your Language

Notifications

webdunia
webdunia
webdunia
webdunia

106 ಪ್ರಕರಣ ಭೇದಿಸಿದ ಕೇಂದ್ರ ವಿಭಾಗ ಪೊಲೀಸ್ರು

106 ಪ್ರಕರಣ ಭೇದಿಸಿದ ಕೇಂದ್ರ ವಿಭಾಗ ಪೊಲೀಸ್ರು
bangalore , ಬುಧವಾರ, 7 ಜೂನ್ 2023 (16:16 IST)
ಬೆಂಗಳೂರಿನ ಕೇಂದ್ರ ವಿಭಾಗ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಒಂದ್  ತಿಂಗಳ ಅವಧಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ನಡೆದಿದ್ದ. ಮನೆ ಕಳವು, ಸರಗಳವು,  ವಂಚನೆ ಪ್ರಕರಣಗಳು ಸೇರಿದಂತೆ ನೂರಕ್ಕು ಹೆಚ್ಚು ಕ್ರೈಂ ಕೇಸ್ ಗಳನ್ನ ಪತ್ತೆಯಚ್ಚಿರೋ ಪೊಲೀಸ್ರು, ಎರಡುವರೆ ಕೋಟಿ ಮೌಲ್ಯದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ. ಯಾವ ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವ ಯಾವ ಕೇಸ್ ಪತ್ತೆಯಾಗಿದೆ .ಬೆಂಗಳೂರ್ ಸಿಟಿಯಲ್ಲಿ ಪೊಲೀಸ್ರು ಎಷ್ಟೇ ಬೀಟ್ ಹೋಡೆದ್ರು, ಕಣ್ಣಲ್ಲಿ ಕಣ್ಣಿಟ್ಟು ಬಂದೋಬಸ್ತ್ ಮಾಡ್ತಿದ್ರು, ಚಾಲಾಕಿ ಕಳ್ಳತರು ತಮ್ಮ ಕೃತ್ಯಗಳನ್ನ ಚಾಚುತಪ್ಪದೇ ಮಾಡ್ತಿದ್ದಾರೆ. ಅದೇ ರೀತಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಕೇಂದ್ರ ವಿಭಾಗ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದಿದ್ದ ಕಳ್ಳತನ, ಸರಗಳ್ಳತನ, ದರೋಡೆ, ಶಸ್ತ್ರಾಸಗಳ ಮಾರಾಟ ಸೇರಿದಂತೆ ಹಲವು ಅಪರಾಧ ಕೃತ್ಯಗಳನ್ನ ಭೇದಿಸಿರುವ ಕೇಂದ್ರ ವಿಭಾಗ ಪೊಲೀಸ್ರು ಬರೋಬ್ಬರಿ 106 ಜನ ಆರೋಪಿಗಳನ್ನ ಬಂಧಿಸಿ, 103 ಕ್ರೈಂ ಕೇಸ್ ಗಳನ್ನ ಪತ್ತೆಯಚ್ಚಿದ್ದಾರೆ.

ಇನ್ನು ಪತ್ತಯಾದ ಪ್ರಕರಣಗಳಲ್ಲಿ ಪ್ರಮುಖವಾಗಿ ಕಬ್ಬನ್ ಪಾರ್ಕ್ ಕಂಟ್ರಿಮೇಡ್ ಪಿಸ್ತೂಲ್ ಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನೀರಜ್ ಜೋಸೇಫ್ ಎಂಬಾತನನ್ನ ಬಂಧಿಸಿದ್ದಾರೆ. ಕೇರಳ ಮೂಲದ ನೀರಜ್ ಜೊಸೇಫ್ ಉತ್ತರ ಭಾರತದಿಂದ ಪಿಸ್ತೂಲ್ ಗಳನ್ನ ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ‌ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸ್ರು ಆರೋಪಿಯನ್ನ ಬಂಧಿಸಿ, ಆತನ ಬಳಿ ಇದ್ದ ಮೂರು ಕಂಟ್ರಿಮೇಡ್ ಪಿಸ್ತೂಲ್ ಗಳು ಹಾಗೂ 99 ಜೀವಂತ ಗುಂಡುಗಳನ್ನ ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿ ಕೃತ್ಯಕ್ಕೆ ಬಳಸುತ್ತಿದ್ದ ಬೆನ್ಜ್ ಕಾರನ್ನ ವಶಪಡಿಸಿಕೊಂಡಿರೋ ಪೊಲೀಸ್ರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ರಸ್ತೆಯಲ್ಲಿ ಒಂಟಿಯಾಗಿ‌ ನಿಂತಿದ್ದ ವ್ಯಕ್ತಿಗಳನ್ನೆ ಟಾರ್ಗೆಟ್ ಮಾಡಿ ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಮೂವರು ವಿವೇಕನಗರ ಪೊಲೀಸ್ರ ಅತಿಥಿಗಳಾಗಿದ್ದಾರೆ. ಸುಹೇಲ್,ಸಕ್ಲೇನ್  ಹಾಗೂ ಸಹೀಬ್ ಮೊಬೈಲ್ ಕದ್ದು, ಸದ್ಯ ಕಂಬಿ ಹಿಂದೆ ಸೇರಿರೋ ಕಳ್ಳರು. ಆರೋಪಿಗಳು ಬೈಕ್ ಗಳಲ್ಲಿ ಸುತ್ತಾಡ್ತ ಯಾರು ರಸ್ತೆ ಬದಿ ಐ ಫೋನ್ ಗಳನ್ನಿಡಿದು ಮಾತನಾಡ್ತಿರ್ತಾರೋ ಅವ್ರನ್ನೇ ಟಾರ್ಗೆಟ್ ಮಾಡಿ ಅವ್ರಿಂದ ಮೊಬೈಲ್ ಗಳನ್ನ ಕಸಿದು ಎಸ್ಕೇಪ್ ಆಗ್ತಿದ್ರು. ಆ ಪ್ರಕರಣ ದಾಖಲಿಸಿಕೊಂಡಿದ್ದ ವಿವೇಕನಗರ ಪೊಲೀಸ್ರು ಆರೋಪಿಗಳನ್ನ ಬಂಧಿಸಿ, ಅವ್ರು ಕಳವು ಮಾಡಿದ್ದ  ವಿವಿಧ ಬ್ರ್ಯಾಂಡೆಡ್ ನ 40 ಲಕ್ಷ ಮೌಲ್ಯದ 113 ಐ ಫೋನ್ ಗಳನ್ನ ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಜನತಾ ದಳದವರಿಗೆ ನಮ್ಮ ಯೋಜನೆ ಜಾರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ- ಡಿಸಿಎಂ ಡಿ.ಕೆ.ಶಿ