Select Your Language

Notifications

webdunia
webdunia
webdunia
webdunia

100 ಕೆ.ಜಿ.ಗಾಂಜಾ ಸೀಜ್

100 ಕೆ.ಜಿ.ಗಾಂಜಾ ಸೀಜ್
bangalore , ಶನಿವಾರ, 16 ಏಪ್ರಿಲ್ 2022 (17:21 IST)
ಪಿಜಿಗಳಲ್ಲಿರೋ ವಿದ್ಯಾರ್ಥಿಗಳು, ಹಾಗೂ ಸಾಫ್ಟ್ ವೇರ್ ಇಂಜನಿಯರ್ ಗಳಿಗೆ ಗಾಂಜಾ ಮಾರಾಟ ಮಾಡ್ತಿದ್ದ  20 ವರ್ಷದ ಸಾದಿಕ್ ನನ್ನು HSR ಲೇ ಔಟ್ ಪೊಲೀಸರು ಬಂಧಿಸಿದ್ದು , ಬಂಧಿತ ಸಾದಿಕ್ ನಿಂದ  100 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.  ತಮಿಳುನಾಡು ಮೂಲದ ಸಾಧಿಕ್  ಬೆಂಗಳೂರಿನ HSR ಲೇ ಔಟ್, ಕೋರಮಂಗಲ, ಸರ್ಜಾಪುರ ರಸ್ತೆಯ ಪಿಜಿಗಳಲ್ಲಿ ಇರೋರಿಗೆ, ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳು, ಸಾಪ್ಟ್ ವೇರ್ ಇಂಜಿನಿಯರ್ಸ್ ಗೆ  ಗಾಂಜಾ ಮಾರಾಟ ಮಾಡ್ತಿದ್ದ.  ಅನುಮಾನಗೊಂಡು ಸಾದಿಕ್ ಬಳಸುತ್ತಿದ್ದ TVs XL ತಡೆದು ಪರಿಶೀಲನೆ ಮಾಡಿದಾಗ ಮೊದಲಿಗೆ‌ 5 ಕೆ.ಜಿ ಗಾಂಜಾ‌ ಪತ್ತೆಯಾಗಿತ್ತು  ನಂತ್ರ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ 100 ಕೆ.ಜಿ‌ ಗಾಂಜಾ ಇರೋದ್ರ ಬಗ್ಗೆ ಮಾಹಿತಿ ಸಿಕ್ಕಿದ್ದು ಸಾಧಿಕ್ ಮಾಹಿತಿ‌‌ ಆಧರಿಸಿ ರೂಂನಲ್ಲಿ ಶೇಖರಣೆ ಮಾಡಿದ್ದ 100 ಕೆ.ಜಿ‌‌‌ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೌವ್ ಬ್ಲಾಸ್ಟ್- ಮಹಿಳೆಗೆ ಗಾಯ