Select Your Language

Notifications

webdunia
webdunia
webdunia
webdunia

ವಿಮಾನ ನಿಲ್ದಾಣದಲ್ಲಿ ದೀಪಾವಳಿ ಸಂಭ್ರಮ

ವಿಮಾನ ನಿಲ್ದಾಣದಲ್ಲಿ ದೀಪಾವಳಿ ಸಂಭ್ರಮ
ಬೆಂಗಳೂರು , ಗುರುವಾರ, 4 ನವೆಂಬರ್ 2021 (17:38 IST)
ದೀಪಗಳ ಹಬ್ಬ ದೀಪಾವಳಿ ಅಂಗವಾಗಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೂ ಹಾಗೂ ದೀಪಗಳಿಂದ ಅಲಂಕರಿಸಿರುವುದು ಪ್ರಯಾಣಿಕರ ಗಮನ ಸೆಳೆಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೀಪಾವಳಿ ಹಬ್ಬದ ಅಂಗವಾಗಿ ಹೂ ಮತ್ತು ದೀಪಗಳಿಂದ ವಿಶೇಷವಾಗಿ ಅಲಂಕರಿಸಿ ಶುಭಾಶಯಗಳನ್ನು ಪ್ರಯಾಣಿಕರಿಗೆ ಕೋರಲಾಗಿದೆ.ಟರ್ಮಿನಲ್‌ ಮತ್ತು ಅರೈವಲ್‌ಗ‌ಳಲ್ಲಿ ಅಲಂಕಾರಿಕ ಗಿಡಗಳು ಹಾಗೂ ಹೂ ಮತ್ತು ದೀಪಗಳಿಂದ ಸಿಂಗರಿಸಲಾಗಿದೆ. ದೇಶ ಮತ್ತು ವಿದೇಶಗಳ ಪ್ರಯಾಣಿಕರಿಗೆ ದೀಪಾವಳಿ ವಿಚಾರ ವಿನಿಮಯವನ್ನು ತಿಳಿಸುವ ಪ್ರಯತ್ನ ವಿಮಾನ ನಿಲ್ದಾಣ ಮಾಡುತ್ತಿದೆ. ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಗೆ ಹೆಚ್ಚಿನ ಮಹತ್ವ ಇದೆ. ಕತ್ತಲಿನಿಂದ ಬೆಳಕಿನಡೆಯ ದೀಪಾವಳಿಯಾಗಿದೆ. ಪ್ರತಿ ಮನೆಗಳಲ್ಲಿ ದೀಪಗಳನ್ನು ಹಚ್ಚಿ ಸಾಂಪ್ರದಾಯಿಕವಾಗಿ ದೀಪಾವಳಿಯನ್ನು ಆಚರಿಸುತ್ತಾರೆ.
 
ಹಣತೆಯ ದೀಪ ಹಚ್ಚಿ ಭಕ್ತಿಯನ್ನು ಸಮರ್ಪಿಸುತ್ತಾರೆ. ನಮ್ಮ ಸಂಸ್ಕೃತಿಯನ್ನು ದೇಶ ವಿದೇಶಗಳಿಗೆ ಪರಿಚಯಿಸುವ ಕೆಲಸವನ್ನು ವಿಮಾನ ನಿಲ್ದಾಣ ಮಾಡುತ್ತಿದೆ. ಟರ್ಮಿನಲ್‌ಗ‌ಳಲ್ಲಿರುವ ದೀಪಾಲಂಕಾರ ಗಮನಸೆಳೆಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯಪಾನ ಮಾಡಿ ನಟನ ಮೇಲೆ ಹಲ್ಲೆ ಯತ್ನ