ಮೊದಲೆಲ್ಲಾ ಚುನಾವಣ ದಿನಾಂಕ ಹತ್ತಿರವಿರುವಾಗ ಟಿಕೆಟ್ ಬಿಡುಗಡೆ ಮಾಡ್ತಿದ್ದ ಕಾಂಗ್ರೆಸ್ ಇದೀಗ 3 ಹಂತದಲ್ಲಿ ಟಿಕೆಟ್ ರಿಲೀಸ್ಗೆ ತಯಾರಿ ನಡೆಸಿ, 2 ಪಟ್ಟಿ ಬಿಡುಗಡೆ ಮಾಡಿದೆ.. ಪಟ್ಟಿ ಬಿಡುಗಡೆಯಾಗ್ತಿದ್ದಂತೆ ಟಿಕೆಟ್ ವಂಚಿತರು ಬಂಡಾಯ ಸಾರುತ್ತಿದ್ದಾರೆ.. ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆಗೆ ದೆಹಲಿಯಲ್ಲಿ ಸಂಜೆ 4 ಗಂಟೆಗೆ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ.. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಅಂತಿಮ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ. ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಲಿದ್ದು, KPCC ಅಧ್ಯಕ್ಷ D.K. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತಿಯಲ್ಲೇ ಸಭೆ ನಡೆಯಲಿದೆ.. ಈಗಾಗಲೇ 166 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದು, ಉಳಿದ 58 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದೆ.. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆಯಾಗಲಿದ್ದು, ಈಗಾಗಲೇ ಕಾಂಗ್ರೆಸ್ನಲ್ಲಿ ಬಂಡಾಯ ಭುಗಿಲೆದ್ದಿದೆ.