Webdunia - Bharat's app for daily news and videos

Install App

ಚಿನ್ನ ಕಳೆದುಕೊಂಡವರಿಗೆ ಚಿನ್ನ ಹಿಂತಿರುಗಿಸಿದ ಆಟೋ ಚಾಲಕ

Webdunia
ಬುಧವಾರ, 30 ನವೆಂಬರ್ 2022 (19:29 IST)
ಪೊಲೀಸ್ರ ಸಮಯಪ್ರಜ್ಞೆ ತೋರಿದ್ರೆ ನೊಂದವರ ಕಣ್ಣೀರನ್ನ ಕ್ಷಣಾರ್ಧದಲ್ಲಿ ದೂರ ಮಾಡಬಹುದು ಅನ್ನೋದಕ್ಕೆ ಇಂಥಹ  ಘಟನೆಗಳು ಸಾಕ್ಷಿಯಾಗುತ್ತೆ. ಗೋವಿಂದರಾಜನಗರದ ನಿವಾಸಿಯಾಗಿರುವ ಮಂಜುನಾಥ್ ದಂಪತಿ 
ತಮಿಳುನಾಡಿನಲ್ಲಿ ಮದುವೆ ಮುಗಿಸಿ ರಾತ್ರಿ ಮೆಜೆಸ್ಟಿಕ್ ನಿಂದ ಆಟೋ ಏರಿದ್ರು.ಹೌಸಿಂಗ್ ಬೋರ್ಡ್ ನಲ್ಲಿ ಇಳಿದು ಬ್ಯಾಗ್ ಬಿಟ್ಟು ನಿದ್ದೆಗಣ್ಣಲ್ಲಿ ಮನೆಗೆ ಹೋಗಿದ್ರು.ಆಟೋದಲ್ಲೆ 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟಿದ್ದ ಮಂಜುನಾಥ್ ಫ್ಯಾಮಿಲಿ ರಾತ್ರಿ  ಬ್ಯಾಗ್ ಮಿಸ್ಸಿಂಗ್ ಗೊತ್ತಾದ ತಕ್ಷಣ ಓಡಿಹೋಗಿ ಗೋವಿಂದರಾಜನಗರ ಪೊಲೀಸರಿಗೆ ದೂರು ನೀಡಿದ್ರು.  ಕೇಸ್ ದಾಖಲಾಗ್ತಿದ್ದಂತೆ ಗೋವಿಂದರಾಜ ಇನ್ಸ್ಪೆಕ್ಟರ್ ಶಿವಕುಮಾರ್ ಕ್ರೈಂ ಟೀಂ ನ ಅಲರ್ಟ್ ಮಾಡಿ ಫೀಲ್ಡಿಗಿಳಿಸಿದ್ರು. ಇತ್ತ ಚಾಲಕ ಹರೀಶ್ ಕೂಡ ಪ್ರಾಮಾಣಿಕತೆಯಿಂದ  ತನ್ನ ಗ್ರಾಹಕನಿಗೆ ಚಿನ್ನ ಹಿಂದಿರುಗಿಸಲು ಹುಡುಕುತ್ತಿದ್ದ. ಪೊಲೀಸ್ರು ಸಿಸಿಟಿವಿ ಹುಡುಕ್ತಾ ಆಟೋ ಹುಡುಕ್ತಿದ್ರೆ ಆಟೋ ಚಾಲಕ ಡ್ರಾಪ್ ಪಾಯಿಂಟ್ ನಿಂದ ಮಂಜುನಾಥ್ ಮನೆ ಹುಡುಕ್ತಿದ್ದ. ಸಿಸಿಟಿವಿ ಆದರಿಸಿ ಆಟೋ ಚಾಲಕ ಮನೆ ತಲುವ ವೇಳೆಗೆ ಆಟೋ ಚಾಲಕ ಹರೀಶನೇ ಸರ್ ಈ ರೀತಿ ಚಿನ್ನ ಬಿಟ್ಟು ಹೋಗಿದ್ದಾರೆ ನಾನು ಕೂಡ‌ ಹುಡುಕ್ತಿದ್ದೆ ಅಂತ ಪೊಲೀಸ್ರಿಗೆ ಚಿನ್ನದ ಬ್ಯಾಗ್ ನೀಡಿದ್ದಾನೆ. ಕೊನೆಗೆ ಆಟೋ ಹರೀಶ್ ಹಾಗೂ  ಮಂಜುನಾಥ್ ನನ್ನು ಠಾಣೆಗೆ ಕರೆಸಿ ಗೋವಿಂದರಾಜನಗರ ಇನ್ಸ್ ಪೆಕ್ಟರ್ ಶಿವ ಪ್ರಸಾದ್ ಸಮ್ಮುಖದಲ್ಲಿ ಚಿನ್ನವನ್ನ ಮಂಜುನಾಥ್ ಗೆ ಹಿಂತಿರುಗಿಸಿದ್ದಾರೆ. ಪೊಲೀಸ್ರ ಸಮಯಪ್ರಜ್ಞೆ ಹಾಗೂ ಆಟೋ ಚಾಲಕನ ನಿಯ್ಯತ್ತಿಗೆ ಚಿನ್ನ ಕಳೆದುಕೊಂಡಿದ್ದ ಕುಟಂಬ ಧನ್ಯವಾದ ಹೇಳಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments