ಕೊರೋನಾಕ್ಕೆ ಒಂದೇ ಜಿಲ್ಲೆಯಲ್ಲಿ 10 ಜನ ಬಲಿ

ಬುಧವಾರ, 29 ಜುಲೈ 2020 (22:33 IST)
ಡೆಡ್ಲಿ ವೈರಸ್ ಗೆ ಒಂದೇ ಜಿಲ್ಲೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ.


ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 10 ಜನ ನಿಧನವಾಗಿರುವ ಬಗ್ಗೆ ವರದಿಯಾಗಿದ್ದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ಮೋಮಿನಪುರ, ಸಂಜೀವ ನಗರ ರೋಗಿಗಳಿಬ್ಬರು ಸಾವನ್ನಪ್ಪಿದ್ದಾರೆ.

ಸೇಡಂ ಪಟ್ಟಣದ ಓರ್ವ, ಕಲಬುರಗಿಯ ಸ್ಟೇಷನ್ ಬಜಾರ್ ಪ್ರದೇಶದ 35 ವರ್ಷದ ಮಹಿಳೆ  ಸೇರಿದಂತೆ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಡಿಯೂರಪ್ಪರಿಗೆ ಡಿಸೆಂಬರ್‌ವರೆಗೆ ಸಿಎಂ ಕುರ್ಚಿ ಭದ್ರ?