Article Kannada Poetry %e0%b2%92%e0%b2%82%e0%b2%a6%e0%b3%86 %e0%b2%95%e0%b3%81%e0%b2%b2 %e0%b2%92%e0%b2%82%e0%b2%a6%e0%b3%86 %e0%b2%a8%e0%b3%86%e0%b2%b2 107052000002_1.htm

Select Your Language

Notifications

webdunia
webdunia
webdunia
webdunia

ಒಂದೆ ಕುಲ ಒಂದೆ ನೆಲ

ಒಂದೆ ಕುಲ
PTI
ಭಾರತಾಂಬೆಯ ಮಡಿಲ ಮಕ್ಕಳು
ನಮ್ಮದೊಂದೇ ಕುಲವು
ಜಾತಿ ನೀತಿಯ ಭೇವಿವಿಲ್ಲವು
ನಮ್ಮದೊಂದೇ ಜಾತಿಯು
ನಮ್ಮದೊಂದೇ ನೀತಿಯು

ಹಿಂದು ಮುಸ್ಲಿಮ್ ಕ್ರೈಸ್ತ ಸಿಖ್ಖರು
ಜೈನ್ ಬೌದ್ಧರು ಎಲ್ಲಿರೊ
ಒಂದೇ ತಾಯಿಯ ಮಕ್ಕಳು
ನಮ್ಮ ಮಣ್ಣಿನ ಮಕ್ಕಳು

ಒಂದೆ ರಕ್ತವು ಒಂದೆ ಪ್ರಾಣವು
ಒಂದೆ ತನವು ನಮ್ಮದು
ಒಂದೆ ಮನವು ನಮ್ಮದು
ಒಂದೆ ಗಾಳಿ ಒಂದೆ ನೀರು
ಒಂದೆ ಮಣ್ಣು ನಮ್ಮದು
ಒಂದೆ ಧ್ಯೇಯ ಒಂದೇ ತತ್ವ
ಒಂದೆ ಉಸಿರು ನಮ್ಮದು

ಸಾಕು ಘರ್ಷಣೆ ಸತ್ಯ ಘೋಷಣೆ
ಯಿಂದ ನಮಗೆ ಮುಕ್ತಿಯು
ಒಂದೆ ಸುಖವು ನಮ್ಮದು
ಒಂದೆ ನೋವು ನಮ್ಮದು
ಒಂದೆ ಬಲವು ಒಂದೆ ಛಲವು
ಒಂದೆ ಗುರಿಯು ನಮ್ಮದು

ಭಾಷೆ ಧರ್ಮ ಹಲವು ಇದ್ದರು
ಹೃದಯ ಭಾಷೆ ನಮ್ಮದು
ಮನುಜ ಧರ್ಮ ನಮ್ಮದು
ರಾಜ್ಯ ಹಲವು ಇದ್ದರೇನು
ನಾಡು ಒಂದೇ ನಮ್ಮದು
ಬೀಡು ಒಂದೆ ನಮ್ಮದು

ಶ್ರೇಷ್ಠ ಕವಿಗಳ ಧರ್ಮವೀರರ
ಪಡೆದ ನಾಡು ನಮ್ಮದು
ಪುಣ್ಯಭೂಮಿ ನಮ್ಮದು
ದೇಶದೆಳ್ಗೆಗೆ ನಾಡ ಸೇವೆಗೆ
ಹಗಲು ರಾತ್ರಿಯು ದುಡಿಯುವಾ

ಸರ್ವತ್ಯಾಗವ ಮಾಡುವಾ
ಏಕಕಂಠದಿ ಏಕನಾದದಿ ಮೊಳಗುವಾ
ದುಷ್ಟ ಶಕ್ತಿಯ ತುಳಿಯುವಾ
ಸತ್ಯ ಶಾಂತಿಯ ಧರ್ಮನೀತಿಯ
ಐಕ್ಯದಿಂದಲಿ ಬಾಳುವಾ

- ಾ| ಶ್ರೀಕೃಷ್ಣ ಭಟ್ ಅರ್ತಿಕಜೆ

Share this Story:

Follow Webdunia kannada