Publish Date: Fri, 19 Aug 2016 (12:35 IST)
Updated Date: Fri, 19 Aug 2016 (12:39 IST)
ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಹಾಗೂ ಅವರ ಪತ್ನಿ ಮಲ್ಲಿಕಾ ಅರೋರ್ ಖಾನ್ ಅವರು ಪರಸ್ಪರ ದೂರವಾಗಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ನಲ್ಲಿ ಬಹು ದಿನಗಳಿಂದ ಕೇಳಿ ಬರುತ್ತಲೇ ಇತ್ತು.ಆದ್ರೆ ಅರ್ಬಾಜ್ ಖಾನ್ ಹಾಗೇ ಸಲ್ಲು ಕುಟುಂಬದವರು ಮಾತ್ರ ಇಲ್ಲ ಅವರಿಬ್ಬರು ಚೆನ್ನಾಗಿದ್ದಾರೆ ಅಂತಾ ಹೇಳುತ್ತಲೇ ಬಂದಿದ್ದರು. ಆದ್ರೀಗ ಈ ಬಗ್ಗೆ ಅರ್ಬಾಜ್ ಖಾನ್ ಅವರೇ ಬಾಯ್ಬಿಟ್ಟಿದ್ದಾರೆ.
ಅರ್ಬಾಜ್ ಖಾನ್ ಹಾಗೂ ಮಲ್ಲಿಕಾ ಖಾನ್ ಪರಸ್ಪರ ದೂರವಾಗಿದ್ದಾರೆ ಅಂತಾ ಸುದ್ದಿಯಾದಾಗ ಅರ್ಬಾಜ್ ಖಾನ್ ಅವರು ಮಾತ್ರ ಹಾಗೇನಿಲ್ಲ ಅಂತಾ ಹೇಳುತ್ತಲೇ ಬಂದಿದ್ದರು. ಆದ್ರೀಗ ಸಂದರ್ಶನವೊಂದರಲ್ಲಿ ಅವರೇ ಬಾಯ್ಬಿಟ್ಟಿದ್ದಾರೆ. ನಿಮ್ಮ ವೈವಾಹಿಕ ಜೀವನ ಹೇಗಿದೆ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾವಿಬ್ಬರು ಬೇರೆ ಬೇರೆಯಾಗಿದ್ದೇವೆ. ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದೇವೆ ಅಂತಾ ಹೇಳೋ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಬಹು ದಿನಗಳಿಂದ ಮುಚ್ಚಿಟ್ಟಿದ್ದ ಸತ್ಯವನ್ನು ಬಹಿರಂಗ ಮಾಡಿದ್ದಾರೆ.
ಇನ್ನು ಇವರಿಬ್ಬರು ಪರಸ್ಪರ ದೂರವಾಗಿದ್ದಾರೆ ಅನ್ನೋದು ಸುದ್ದಿಯಾದ ಬಳಿಕವೂ ಅರ್ಬಾಜ್ ಖಾನ್ ಅವರ ಬರ್ತಡೇಗೆ ಮಲ್ಲಿಕಾ ಶುಭಾಶಯ ಕೋರಿದ್ರು. ಈದ್ ಆಚರಣೆಯಲ್ಲೂ ಸಲ್ಲು ಮನೆಗೆ ಭೇಟಿ ನೀಡಿದ್ದರು.ನಾವಿಬ್ಬರು ದೂರವಾಗಲ್ಲ ಅಂತಾ ಹೇಳಿದ್ದರು.ಆದ್ರೀಗ ಅವರಿಬ್ಬರು ದೂರವಾಗಿರೋದನ್ನು ಸ್ವತಃ ಅರ್ಬಾಜ್ ಖಾನ್ ಅವರೇ ಬಹಿರಂಗ ಮಾಡಿ ಬಹು ದಿನಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.