Select Your Language

Notifications

webdunia
webdunia
webdunia
webdunia

ತಮ್ಮ ಸಹೋದರಿಯರೊಂದಿಗೆ ರಾಖಿ ಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್

ತಮ್ಮ ಸಹೋದರಿಯರೊಂದಿಗೆ ರಾಖಿ ಹಬ್ಬ ಆಚರಿಸಿಕೊಂಡ ಸಲ್ಮಾನ್ ಖಾನ್
, ಶುಕ್ರವಾರ, 19 ಆಗಸ್ಟ್ 2016 (12:32 IST)
ಭಾತೃತ್ವದ ಸಂದೇಶ ಸಾರುವ ರಾಖಿ ಹಬ್ಬವನ್ನು ನಿನ್ನೆ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಯ್ತು. ತಮ್ಮ ನೆಚ್ಚಿನ ಸಹೋದರ ಸಹೋದರಿಯರಿಗೆ ಶುಭ ಹಾರೈಸುವ ಮೂಲಕ ಜನ ಶುಭಾಶಯ ವಿನಿಮಾಯ ಮಾಡಿಕೊಂಡಿದ್ರು. ಇನ್ನು ಸಿನಿಮಾ ತಾರೆಯರು ಕೂಡ ರಾಖಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ರು.

ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ರಕ್ಷಾ ಬಂಧನದ ಸಂಭ್ರಮ ಕಳೆಕಟ್ಟಿತ್ತು. ತಮ್ಮ ಪ್ರೀತಿಯ ಸಹೋದರನಿಗೆ ಸಲ್ಲು ಅವರ ಮುದ್ದಿನ ಸಹೋದರಿಯರಾದ ಅರ್ಪಿತಾ ಖಾನ್ ಹಾಗೂ ಅಲ್ವಿರಾ ಖಾನ್ ಅವರು ರಾಖಿಯನ್ನು ಕಟ್ಟಿ ಶುಭ ಕೋರಿದ್ರು. ಇನ್ನು ಅಚ್ಚರಿಯ ವಿಚಾರ ಅಂದ್ರೆ ಸಲ್ಲು ಮನೆಯಲ್ಲಿ ನಡೆದ ರಾಖಿ ಸಂಭ್ರಮದಲ್ಲಿ ಲೂಲಿಯಾ ಕೂಡ ಭಾಗಿಯಾಗಿದ್ದರು. ಅಲ್ಲದೇ ಮಕ್ಕಳ ಸಂಭ್ರಮದಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಹಾಗೂ ಮಲ ತಾಯಿ ಹೆಲೆನ್ ಅವರು ಭಾಗಿಯಾಗಿದ್ರು.
 
 ಇನ್ನು ತಮ್ಮ ಮನೆಯಲ್ಲಿ ನಡೆದ ರಾಖಿ ಹಬ್ಬದ ಸಂಭ್ರಮವನ್ನು ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.ಅಲ್ಲದೇ ಸಂತಸದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ.ಅಲ್ಲದೇ ರಕ್ಷಾ ಬಂಧನದ ವೇಳೆ ಅರ್ಬಾಜ್ ಖಾನ್ ಅವರನ್ನು ಮಿಸ್ ಮಾಡಿಕೊಂಡೆವು ಅಂತಾ ಅರ್ಪಿತಾ ಖಾನ್ ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್ ಜೊತೆ ಮುನಿಸಿಕೊಂಡಿದ್ದಾರಾ ಸಂಜಯ್ ಲೀಲಾ ಬನ್ಸಾಲಿ?