Publish Date: Sat, 22 Oct 2016 (13:16 IST)
Updated Date: Sat, 22 Oct 2016 (13:21 IST)
ಬೆಂಗಳೂರು: ಜೋಗಿ ಸಿನಿಮಾ ಖ್ಯಾತಿಯ ನಿರ್ದೇಶಕ, ನಟ ಪ್ರೇಮ್ ಗೆ ಇಂದು ಜನುಮ ದಿನದ ಸಂಭ್ರಮ.
ನಟಿ ರಕ್ಷಿತಾ ಅವರ ಪತಿಯೂ ಆಗಿರುವ ಪ್ರೇಮ್, ಕನ್ನಡ ಸಿನಿಮಾ ಜಗತ್ತಿನ ಶೋ ಮ್ಯಾನ್ ಎಂದೇ ಕರೆಯಿಸಿಕೊಂಡವರು. ತಮ್ಮ ಚಿತ್ರಕ್ಕೆ ವಿಶಿಷ್ಟ ರೀತಿಯಲ್ಲಿ ಪ್ರಚಾರ ಕೊಡುವ ಪ್ರೇಮ್ ಕನ್ನಡ ಸಿನಿಮಾದ ಸ್ಟಾರ್ ನಟರನ್ನು ನಿರ್ದೇಶಿಸಿದವರು.
ಶಿವರಾಜ್ ಕುಮಾರ್ ಗೆ ಜೋಗಿ ಚಿತ್ರದ ಮೂಲಕ ಹೊಸದೊಂದು ಇಮೇಜ್ ಕೊಟ್ಟ ಖ್ಯಾತಿ ಅವರದ್ದು. ಇತ್ತೀಚೆಗೆ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರನ್ನು ಜತೆಯಾಗಿಸಿ ಸಿನಿಮಾ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಅದಿನ್ನೂ ಪೂರ್ತಿಯಾಗಿಲ್ಲ.
ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದ ಪ್ರೇಮ್, ನಟ, ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಇಂತಿಪ್ಪ ಜೋಗಿ ಪ್ರೇಮ್ ಗೆ ನಮ್ಮ ಕಡೆಯಿಂದ ಒಂದು ಹ್ಯಾಪಿ ಬರ್ತ್ ಡೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ