Select Your Language

Notifications

webdunia
webdunia
webdunia
webdunia

ಚಿತ್ರ ವಿಮರ್ಶೆ:ಇದು ನಟರಾಜ ಸರ್ವಿಸ್, ಎಕ್ಸ್ ಪ್ರೆಸ್ ಅಲ್ಲ!

ಚಿತ್ರ ವಿಮರ್ಶೆ:ಇದು ನಟರಾಜ ಸರ್ವಿಸ್, ಎಕ್ಸ್ ಪ್ರೆಸ್ ಅಲ್ಲ!
Bangalore , ಶುಕ್ರವಾರ, 18 ನವೆಂಬರ್ 2016 (09:27 IST)
ಬೆಂಗಳೂರು: ಈವತ್ತೊಂದು ದಿನ ಆರಾಮವಾಗಿ ಕಾಲ ಕಳೆಯಲು ಒಂದು ಎಂಟರ್ ಟೈನ್ ಮೆಂಟ್ ಬೇಕು ಎನ್ನುವವರು ನಟರಾಜ ಸಿನಿಮಾವನ್ನು ನೋಡಬಹುದು. ಕಿವಿಗೆ ತಂಪಾದ ಸಂಗೀತವಿದೆ, ನವಿರಾದ ಹಾಸ್ಯವಿದೆ, ಅಶ್ಲೀಲವಿಲ್ಲ.. ಕುಟುಂಬ ಸಮೇತ ನೋಡಬಹುದಾದ ಡೀಸೆಂಟ್ ಚಿತ್ರ ನಟರಾಜ ಎಕ್ಸ್ ಪ್ರೆಸ್.

ಒಬ್ಬ ಕಳ್ಳ ಮತ್ತೊಬ್ಬಳು ಪ್ರೀತಿಸಿದವರನ್ನು ಕಳೆದುಕೊಂಡ ನತದೃಷ್ಟ ಹುಡುಗಿಯ ನಡುವೆ ನಡೆಯುವ ಕತೆಯಿದು. ಆತ ಕಳ್ಳ ಆದರೂ ದರೋಡೆ ಮಾಡುವವನೋ, ತಲೆ ಒಡೆಯುವವನೋ, ರೇಪ್ ಮಾಡುವ ತಲೆಹಿಡುಕನೋ ಅಲ್ಲ. ಡೀಸೆಂಟ್ ಕಳ್ಳ! ಆದರೆ ಮುಂದೊಂದು ದಿನ ಬ್ಯಾಂಕ್ ದರೋಡೆ ಮಾಡಿ ಕಳ್ಳತನದಲ್ಲಿ ಪ್ರಮೋಷನ್ ಪಡೆಯುವುದೇ ಅವನ ಗುರಿ!

ಆತನಿಗೆ ಆಕಸ್ಮಿಕವಾಗಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಆಕೆ ಇದುವರೆಗೆ ನಾಲ್ಕು ಜನ ಹುಡುಗರನ್ನು ಪ್ರೀತಿಸಿ ಅವರನ್ನೆಲ್ಲಾ ಕಳೆದುಕೊಂಡ ನತದೃಷ್ಟೆ. ಆಕೆಯನ್ನು ಪ್ರೀತಿಸುವ ಐದನೇ ಹುಡುಗ ಈ ಕಳ್ಳ. ಆಕೆಯ ಕಷ್ಟಕ್ಕೆ ಜತೆಯಾಗಲು ಬರುವವನು ಅರಿವಿಲ್ಲದಂತೇ ಅವಳಿಗೆ ಬೀಳುತ್ತಾನೆ. ಮುಂದೇನಾಗುತ್ತದೆ ಎಂದು ಸಿನಿಮಾ ನೋಡಿ ತಿಳಿಯಬೇಕು.

ಕಾಮಿಡಿ ಹೆಸರಾಗಿರುವ ಶರಣ್ ಇಲ್ಲಿ ಪ್ರೇಕ್ಷಕರಿಗೆ ಪಂಚಿಂಗ್ ಡೈಲಾಗ್ ನಿಂದ ಮನರಂಜನೆ ಕೊಡುತ್ತಾರೆ. ಮುಗ್ಧ ಹುಡುಗಿ ಸಹನಾ ಪಾತ್ರ ಮಾಡಿರುವ ಮಯೂರಿ ಗಮನ ಸೆಳೆಯುತ್ತಾರೆ. ನಾಯಕನನ್ನು ಡಿಫರೆಂಟಾಗಿ ಪರಿಚಯಿಸುವ ಅಲ್ಲಾ ಯಾ ಅಲ್ಲಾ ಹಾಡಿನಿಂದ ರವಿಶಂಕರ್ ಇಷ್ಟವಾಗುತ್ತಾರೆ. ಉಳಿದಂತೆ ಖಡಕ್ ಪೊಲೀಸ್ ಅಧಿಕಾರಿ ರಾಕ್ ಲೈನ್ ವೆಂಕಟೇಶ್ ಸಹಜಾಭಿನಯವಿದೆ.

ಶರಣ್ ಸಿನಿಮಾವಾದ ಕಾರಣ ಕಾಮಿಡಿ ಇನ್ನೂ ಇದ್ದಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಆದರೆ ಅನೂಪ್ ಸಿಳೀನ್ ಸಂಗೀತ ನಮ್ಮ ಕಿವಿ ತಂಪಾಗಿಸುತ್ತದೆ. ನಿರ್ದೇಶಕ ಪವನ್ ಒಡೆಯರ್ ಕೆಲವೊಂದು ಸನ್ನಿವೇಶಗಳಲ್ಲಿ ಬೋರ್  ಹೊಡೆಸಿದರೂ, ಇದೊಂದು ಹೊಸತನದ ಕತೆ ಎನ್ನುವ ಕಾರಣಕ್ಕೆ ಅವನ್ನೆಲ್ಲಾ ಕ್ಷಮಿಸಿ ಚಿತ್ರ ನೋಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ನಲ್ಲಿ ಅಭಿಷೇಕ್ ಬಚ್ಚನ್ ಗೆ 10 ದಶಲಕ್ಷ ಹಿಂಬಾಲಕರು!