Select Your Language

Notifications

webdunia
webdunia
webdunia
webdunia

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

Sandalwood actress Ranya Rao, gold smuggling, chargesheet submitted

Sampriya

ಬೆಂಗಳೂರು , ಶುಕ್ರವಾರ, 7 ನವೆಂಬರ್ 2025 (14:50 IST)
Photo Credit X
ಬೆಂಗಳೂರು: ವಿದೇಶದಿಂದ ಚಿನ್ನ ಅಕ್ರಮ ಸಾಗಣೆ ಸಂಬಂಧ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ವಿರುದ್ಧದ ಪ್ರಕರಣದ ತನಿಖೆಯು ಕ್ಲೈಮ್ಯಾಕ್ಸ್‌ ಹಂತ ತಲುಪಿದೆ.

ಈ ಪ್ರಕರಣದ ಕುರಿತಂತೆ 6 ತಿಂಗಳಿಂದ ತನಿಖೆ ನಡೆಸುತ್ತಾ ಇದ್ದ ಡಿಆರ್‌ಐ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸಿದೆ. ₹ 123 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಾಟ  ಮಾಡಿರೋದು ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

ಪ್ರಕರಣ ಸಂಬಂಧ ಈಗಾಗಲೇ ಐದು ಆರೋಪಿಗಳಿಗೂ ಕೂಡ ಶೋಕಾಸ್ ನೋಟಿಸ್ ನೀಡಿದ್ದ ಡಿಆರ್‌ಐ ಕೇವಲ ರನ್ಯಾ ರಾವ್ ₹ 102 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ತನಿಖೆಯಲ್ಲಿ ಅನಾವರಣ ಆಗಿದೆ. 

ಇನ್ನುಳಿದ ನಾಲ್ವರು ಆರೋಪಿಗಳಿಗೂ ಕೂಡ ಪ್ರತ್ಯೇಕ ಶೋಕಾಸ್ ನೋಟಿಸ್ ನೀಡಲಾಗಿತ್ತು. ಈಗ ಪ್ರಕರಣ ಕೊನೆಯ ಹಂತಕ್ಕೆ ತಲುಪಿದ್ದು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ತಯಾರಿ ನಡೆದಿದೆ.  

ರನ್ಯಾ ಅವರ ಮಲತಂದೆ ರಾಮಚಂದ್ರರಾವ್ ಅವರ ಕಾರು ದುರ್ಬಳಕೆ, ರಾಜಕಾರಣಿಗಳ ಹೆಸರು ದುರ್ಬಳಕೆ ಎಲ್ಲಾ ಮಾಹಿತಿಯೂ ತನಿಖೆಯಲ್ಲಿ ಬಹಿರಂಗ ಆಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪರಶುರಾಮನ ಪಾತ್ರಕ್ಕೆ ಮದ್ಯ, ನಾನ್ ವೆಜ್ ಬಿಟ್ಟ ವಿಕ್ಕಿ ಕೌಶಾಲ್: ಪತ್ನಿ ಜೊತೆ ಅದನ್ನೂ ಮಾಡ್ಬೇಡಿ ಎಂದ ನೆಟ್ಟಿಗರು