ನವದೆಹಲಿ: ₹60 ಕೋಟಿ ವಂಚನೆ ಪ್ರಕರಣ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ಕೊನೆಗೂ ಮೌನ ಮುರಿದು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.
₹ 60 ಕೋಟಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರಿಗೆ 3 ಬಾರಿ ಸಮನ್ಸ್ ನೀಡಲಾಗಿದೆ. ಇಬ್ಬರೂ ಲಂಡನ್‌ನಲ್ಲಿರುವುದಾಗಿ ಹೇಳಿ ತಮ್ಮ ವಕೀಲರ ಮೂಲಕ ತನಿಖಾಧಿಕಾರಿಗಳಿಗೆ ಹೇಳಿಸಿದ್ದಾರೆ.
ಇದರಿಂದಾಗಿ ಅವರು ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ಪ್ರತಿ ಬಾರಿ ಅವರ ಪರವಾಗಿ ವಕೀಲ ಪ್ರಶಾಂತ್ ಪಾಟೀಲ್ ಹಾಜರಾಗಿದ್ದರು. ಆದರೆ, ಇಒಡಬ್ಲ್ಯು ವಕೀಲರಿಂದ ಸಂಪೂರ್ಣ ಮಾಹಿತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ 3 ಬಾರಿ ಸಮನ್ಸ್‌ಗಳ ನಂತರ, ಆಗಸ್ಟ್‌ನಲ್ಲಿ ದಂಪತಿಗಳ ವಿರುದ್ಧ ದೂರು ದಾಖಲಾಗಿತ್ತು.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಆಗಸ್ಟ್‌ನಲ್ಲಿ ₹ 60 ಕೋಟಿ ವಂಚನೆ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿತ್ತು .