18 ವರ್ಷಗಳ ಹಿಂದೆ ಒಂದಾಗೋಣ ಸಿನಿಮಾದ ಮೂಲಕ ಕಮಾಲ್ ಮಾಡಿದ್ದ ನಟ ರವಿಚಂದ್ರನ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಜೋಡಿ ಇದೀಗ ಬಹಳ ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕಿದೆ.
ಈ ಜೋಡಿ ಹಲವು ವರ್ಷಗಳ ಬಳಿಕ ಮತ್ತೇ ತೆರೆಮೇಲೆ ಕಾಣಿಸಿಕೊಂಡಿದೆ. ಧ್ರುವ ಸರ್ಜಾ ಅಭಿನಯಿಸಿ, ಜೋಗಿ ಪ್ರೇಮ್ ನಿರ್ದೇಶಿಸಿರುವ ಬಹುನಿರೀಕ್ಷಿತ ಕೆಡಿ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಹವಾ ಸೃಷ್ಟಿಸಿದ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.
ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರಗಳಂತಹ ಹಿಟ್ ಸಿನಿಮಾ ನೀಡಿದ್ದ ಈ ಜೋಡಿ ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಇದೇ ವೇದಿಕೆಯಲ್ಲಿ ಚಿತ್ರದ ಬಂಗಾರದಿಂದ ಬಣ್ಣಾನಾ ತಂದ ಸೂಪರ್ ಹಿಟ್ ಹಾಡಿಗೆ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.