ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಬಹಳ ವರ್ಷಗಳಿಂದ ಮುಚ್ಚಿಟ್ಟುಕೊಂಡಿದ್ದ ರಹಸ್ಯವೊಂದು ಈಗ ಎಲ್ಲರೆದುರೇ ಬಹಿರಂಗವಾಗಿದೆ. ಅಷ್ಟಕ್ಕೂ ಆ ರಹಸ್ಯವೇನು ಇಲ್ಲಿದೆ ನೋಡಿ ವಿಡಿಯೋ.
ನಟ ರವಿಚಂದ್ರನ್ ಬಹಳ ವರ್ಷಗಳಿಂದ ಎಲ್ಲೇ ಓಡಾಡುವಾಗಲೂ ಟೋಪಿ ಧರಿಸಿ ಓಡಾಡುತ್ತಾರೆ. ರವಿ ಮಾಮ ಹೀಗೆ ಯಾಕೆ ಮಾಡ್ತಿದ್ದಾರೆ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ ಬಿಡಿ. ಗುಂಗುರು ಕೂದಲಿನ ಸ್ಪುರದ್ರೂಪಿಯಾಗಿದ್ದ ರವಿಚಂದ್ರನ್ ಒಂದಷ್ಟು ವರ್ಷವಾದ ಮೇಲೆ ಕೂದಲು ಕಳೆದುಕೊಂಡರು.
ಆದರೆ ರವಿಚಂದ್ರನ್ ಗೆ ತಮ್ಮ ಬೋಳು ತಲೆಯನ್ನು ಎಲ್ಲೂ ತೋರಿಸಲು ಇಷ್ಟವಿರಲಿಲ್ಲ. ಈ ಕಾರಣಕ್ಕೆ ಅವರು ಎಲ್ಲೇ ಹೋಗುವುದಿದ್ದರೂ ಟೋಪಿ ಧರಿಸಿಯೇ ಹೋಗುತ್ತಾರೆ. ಒಮ್ಮೆಯೂ ಅದನ್ನು ತೆಗೆದು ತಮ್ಮ ಬೋಳು ತಲೆಯನ್ನು ಹೊರಗೆಲ್ಲೂ ತೋರಿಸಿಕೊಂಡಿರಲಿಲ್ಲ.
ಆದರೆ ಈಗ ಹಂಸಲೇಖ ನಿರ್ದೇಶನದ ಓಕೆ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದ ರವಿಚಂದ್ರನ್ ಅಕಸ್ಮಾತ್ತಾಗಿ ವೇದಿಕೆ ಮೇಲೆ ಟೋಪಿ ಸರಿಪಡಿಸಿಕೊಂಡಿದ್ದು ಅವರ ಬೋಳು ತಲೆ ಬಯಲಾಗಿದೆ. ಇದೇ ಮೊದಲ ಬಾರಿಗೆ ಈ ರೀತಿ ರವಿಚಂದ್ರನ್ ತಮ್ಮ ಬೋಳು ತಲೆಯನ್ನು ಪ್ರದರ್ಶಿಸಿದ್ದು. ಆ ವಿಡಿಯೋ ಇಲ್ಲಿದೆ ನೋಡಿ.