Webdunia - Bharat's app for daily news and videos

Install App

ಯುವ ಸಿನಿಮಾ ಮೊದಲ ಹಾಡು ಇಂದು ಬಿಡುಗಡೆ

Krishnaveni K
ಶನಿವಾರ, 2 ಮಾರ್ಚ್ 2024 (11:23 IST)
ಬೆಂಗಳೂರು: ದೊಡ್ಮನೆ ಹುಡುಗ ಯುವ ರಾಜ್ ಕುಮಾರ್ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ಸಿನಿಮಾ ‘ಯುವ’. ಈ ಸಿನಿಮಾದ ಮೊದಲ ಹಾಡು ಇಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ.

ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಯುವ ಸಿನಿಮಾಗೆ ಬಂಡವಾಳ ಹಾಕುತ್ತಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯೂಥ್ ಫುಲ್ ಸ್ಟೋರಿ ಮಾಡುವುದರಲ್ಲಿ ಸಂತೋಷ್ ಎತ್ತಿದ ಕೈ. ಹೀಗಾಗಿ ಈ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಯಿದೆ.

ಡಾ.ರಾಜ್ ಕುಟುಂಬದ ಮತ್ತೊಂದು ತಲೆಮಾರು ಚಿತ್ರರಂಗಕ್ಕೆ ಕಾಲಿಡುತ್ತಿರುವ ಕಾರಣಕ್ಕೆ ಈ ಸಿನಿಮಾ ವಿಶೇಷವಾಗಿದೆ. ಯುವರಾಜ್ ಕುಮಾರ್ ರನ್ನು ದೊಡ್ಮನೆ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಸ್ಥಾನ ತುಂಬುವವರು ಎಂದು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಈ ಸಿನಿಮಾದ ‘ಒಬ್ಬನೇ ಶಿವ ಒಬ್ಬನೇ ಯುವ’ ಎಂಬ ಸಾಲಿನ ಹಾಡು ಇಂದು ಲಾಂಚ್ ಆಗುತ್ತಿದೆ. ಇದನ್ನು ಜನರ ಮುಂದೆಯೇ ರಿಲೀಸ್ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಇಂದು ಚಾಮರಾಜನಗರದ ಚಾಮರಾಜೇಶ‍್ವರ ದೇವಾಲಯದ ಎದುರಿನ ಮೈದಾನದಲ್ಲಿ ಹಾಡಿನ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯುವ ಸಿನಿಮಾಗೆ ಕಾಂತಾರ ಖ್ಯಾತಿ ಅಜನೀಶ್ ಬಿ. ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಕೆಜಿಎಫ್, ಸಲಾರ್ ನಂತಹ ಹಿಟ್ ಚಿತ್ರಗಳನ್ನು ಕೊಟ್ಟ ಹೊಂಬಾಳೆ ಫಿಲಂಸ್ ಯುವ ಸಿನಿಮಾವನ್ನೂ ಅದ್ಧೂರಿಯಾಗಿಯೇ ತಯಾರು ಮಾಡಿದೆ. ಈ ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಬ್ಬ ಹೀರೋ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ಮುಂದಿನ ಸುದ್ದಿ
Show comments