Select Your Language

Notifications

webdunia
webdunia
webdunia
webdunia

ಚಿತ್ರನಿರ್ಮಾಪಕರ ಜಗಳದಲ್ಲಿ ಯುವಕನ ಹತ್ಯೆ

ಚಿತ್ರನಿರ್ಮಾಪಕರ ಜಗಳದಲ್ಲಿ ಯುವಕನ ಹತ್ಯೆ
Bangalore , ಶುಕ್ರವಾರ, 3 ಮಾರ್ಚ್ 2017 (21:31 IST)
ಹಣಕಾಸು ವಿಚಾರಕ್ಕಾಗಿ ಚಿತ್ರ ನಿರ್ಮಾಪಕರಿಬ್ಬರ ನಡುವೆ ನಡೆದ ಜಗಳದಲ್ಲಿ ಯುವಕನೊಬ್ಬ ಬಲಿಯಾದ ಘಟನೆ ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಾಲಕ್ಷ್ಮಿಲೇಔಟ್‌ನ ಸೋಮೇಶ್ವರನಗರ ನಿವಾಸಿ ಮನೋಜ್ (32) ಜಗಳಕ್ಕೆ ಬಲಿಯಾದ ಯುವಕ.
 
’ಡೇಂಜರ್ ಜೋನ್’ ಎಂಬ ಚಿತ್ರದ ನಿರ್ಮಾಪಕ ಸ್ವರೂಪ್ ಗೌಡ ತನ್ನ ಜತೆ ಕೆಲಸ ಮಾಡುವ ಮನೋಜ್ ಹಾಗೂ ಸ್ನೇಹಿತರಾದ ಗೋಪಿ ಮುಂತಾದವರ ಜತೆ ಸೇರಿ ಮಹಾಲಕ್ಷ್ಮಿಲೇಔಟ್‌ನ ಎಪಿಎಂಸಿ ಯಾರ್ಡ್‍ನಲ್ಲಿ ಪಾನಗೋಷ್ಠಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಡೇಂಜರ್ ಜೋನ್ ಸಹ ನಿರ್ಮಾಪಕ ರಾಮು ಅಲ್ಲಿಗೆ ಬಂದಿದ್ದಾರೆ. ಸ್ವರೂಪ್ ಗೌಡ ಜತೆ ಹಣಕಾಸು ವಿಚಾರವಾಗಿ ಜಗಳ ಶುರುವಾಗಿದೆ.
 
ಇದೇ ಸಂದರ್ಭದಲ್ಲಿ ರಾಮು ಕರೆ ಮಾಡಿ ಮೂರ್ನಾಲ್ಕು ಮಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಸ್ವರೂಪ್, ಗೋಪಿ ಮುಂತಾದವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಮೃತಪಟ್ಟಿದ್ದಾನೆ. ಮಹಾಲಕ್ಷ್ಮಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ತಂದೆ ನಿರ್ದೇಶನದ ಕನ್ನಡದ ’ಶ್ರೀವಲ್ಲೀ’