Select Your Language

Notifications

webdunia
webdunia
webdunia
webdunia

ರಾಜಮೌಳಿ ತಂದೆ ನಿರ್ದೇಶನದ ಕನ್ನಡದ ’ಶ್ರೀವಲ್ಲೀ’

ರಾಜಮೌಳಿ ತಂದೆ ನಿರ್ದೇಶನದ ಕನ್ನಡದ ’ಶ್ರೀವಲ್ಲೀ’
Bangalore , ಶುಕ್ರವಾರ, 3 ಮಾರ್ಚ್ 2017 (21:24 IST)
ಎಸ್ ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಕರ್ನಾಟಕದ ರಾಯಚೂರಿನ ಮಾನ್ವಿ ಮೂಲದವರು. ಈಗವರು ಕನ್ನಡ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ಶ್ರೀವಲ್ಲೀ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.
 
ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತೆರೆಗೆ ತರಲಾಗುತ್ತಿದೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಪಂಚತಾರಾ ಹೋಟೆಲ್‌ನಲ್ಲಿ ನಡೆಯಿತು. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿರುವುದು ವಿಶೇಷ.
 
ಈ ಚಿತ್ರದಲ್ಲಿ ಹೆಚ್ಚು ಗ್ರಾಫಿಕ್ಸ್ ಬಳಸಿಕೊಳ್ಳಲಾಗಿದೆಯಂತೆ. ಚಿತ್ರದಲ್ಲಿ ರಂಜನ್ ಹಾಗೂ ನೇಹಾ ಮುಖ್ಯಭೂಮಿಕೆಯಲ್ಲಿದ್ದಾರೆ. ಅದಿತ್ಯ ಮೂಸಿಕ್ ಹೊರತಂದಿರುವ ಧ್ವನಿಸುರುಳಿಯಲ್ಲಿ ಮೂರು ಹಾಡುಗಳಿದ್ದು ಶ್ರೀಲೇಖಾ ರಾಗ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ರಾಜಮೌಳಿ ಹಾಗೂ ಪ್ರಭಾಸ್ ಅವರ ಸಹಕಾರ ಸಹ ಇದೆಯಂತೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ’ಹೆಬ್ಬುಲಿ’