ಹಿಂದಿ ವಿವಾದಕ್ಕೆ ಯೋಗರಾಜ್ ಭಟ್ ಸ್ಪಷ್ಟನೆ

Webdunia
ಶನಿವಾರ, 30 ಏಪ್ರಿಲ್ 2022 (09:20 IST)
ಬೆಂಗಳೂರು: ಅಜಯ್ ದೇವಗನ್-ಕಿಚ್ಚ ಸುದೀಪ್ ನಡುವೆ ನಡೆದ ಹಿಂದಿ ಭಾಷೆ ಕುರಿತಾದ ಟ್ವೀಟ್ ವಾರ್ ಬಗ್ಗೆ ಪ್ರತಿಕ್ರಿಯಿಸುವಾಗ ತಪ್ಪು ಅರ್ಥ ಬರುವಂತೆ ಹೇಳಿಕೆ ನೀಡಿದ್ದ ನಿರ್ದೇಶಕ ಯೋಗರಾಜ್ ಭಟ್ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಯೋಗರಾಜ್ ಭಟ್ ಈ ಮೊದಲು ಪತ್ರಕರ್ತರು ಕೇಳಿದ ಪ್ರಶ್ನೆಗೆ ನನಗೆ ಹಿಂದಿಯೂ ಗೊತ್ತು, ಕನ್ನಡವೂ ಗೊತ್ತು ಎಂದು ಹಿಂದಿ ರಾಷ್ಟ್ರಭಾಷೆ ಎಂಬ ಅರ್ಥ ಬರುವಂತೆ ವಿವಾದಿತವಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ನೆಟ್ಟಿಗರಿಂದ ತೀವ್ರ ಟೀಕೆ ಕೇಳಿಬಂದಿತ್ತು.

ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಯೋಗರಾಜ್ ಭಟ್, ‘ರಾಷ್ಟ್ರೀಯ ಭಾಷೆ ಬಗ್ಗೆ ಮಾಧ್ಯಮಮಿತ್ರರು ಪ್ರಶ್ನಿಸಿದಾಗ ಅದರ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನು ನಾನಲ್ಲ ಎಂದಿದ್ದೇನೆಯೇ ಹೊರತು ಹಿಂದಿಯೇ ರಾಷ್ಟ್ರಭಾಷೆ ಎಂದಿಲ್ಲ. ಯಾರೇ ಆಗಲೀ ಹಿಂದಿಯನ್ನು ರಾಷ್ಟ್ರಭಾಷೆ ಎಂದ ಮಾತ್ರಕ್ಕೆ ಅದು ರಾಷ್ಟ್ರಭಾಷೆಯಾಗುವುದಿಲ್ಲ. ಹೀಗಾಗಿ ವಿವಾದಕ್ಕೆ ಅಚ್ಚ ಕನ್ನಡದಲ್ಲಿ ಅಂತ್ಯ ಹಾಡಬೇಕೆಂದು ಹೇಳಿಕೆ ನೀಡಿದ್ದೆ. ನನ್ನ ಕನ್ನಡಾಭಿಮಾನದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನಾನು ನನ್ನ ಸನ್ಮಿತ್ರರಾದ ಕಿಚ್ಚ ಸುದೀಪ್ ಸಾಹೇಬರ ಪರ. ಕನ್ನಡವೇ ನನ್ನ ಪಾಲಿನ ಮಾತೃಭಾಷೆ’ ಎಂದು ಯೋಗರಾಜ್ ಭಟ್ ಲಿಖಿತವಾಗಿ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ಮುಂದಿನ ಸುದ್ದಿ
Show comments