ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ನಡುವಿನ ಅಡಿಯೋ ಒಂದು ನಿನ್ನೆ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು.
ಯೋಗರಾಜ್ ಭಟ್ ನಿರ್ದೇಶನದ ಪದವಿ ಪೂರ್ವ ಎಂಬ ಸಿನಿಮಾ ಹಕ್ಕನ್ನು ಖರೀದಿಸುವುದಾಗಿ ರಾಘವೇಂದ್ರ ಹುಣಸೂರು ಪ್ರಾಮಿಸ್ ಮಾಡಿದ್ದರಂತೆ. ಆದರೆ ಈಗ ಫೋನ್ ಕಾಲ್ ಸ್ವೀಕರಿಸದೇ ಸತಾಯಿಸುತ್ತಿದ್ದಾರೆ ಎನ್ನುವುದು ಭಟ್ಟರ ಆಕ್ರೋಶಕ್ಕೆ ಕಾರಣವಾಗಿದೆ.
10 ರಿಂದ 15 ಬಾರಿ ಕರೆ ಮಾಡಿ ವಾರ ಕಳೆದರೂ ರಾಘವೇಂದ್ರ ಕರೆಯೂ ಎತ್ತಿಲ್ಲ, ವಾಪಸ್ ಕರೆಯನ್ನೂ ಮಾಡಿಲ್ಲ. ಇದು ಭಟ್ಟರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಬೇಸತ್ತ ವಾಯ್ಸ್ ನೋಟ್ ಕಳುಹಿಸಿದ್ದು 10 ನಿಮಿಷದಲ್ಲಿ ಕರೆ ಮಾಡದೇ ಇದ್ದರೆ ಅಡಿಯೋ ಒಂದನ್ನು ಹೊರಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಅದರಂತೆ ಕೆಲವು ಸಮಯದ ಬಳಿಕ ಭಟ್ಟರು ತಮ್ಮದೇ ಶೈಲಿಯಲ್ಲಿ ರಾಘವೇಂದ್ರ ಹುಣಸೂರುಗೆ ಯದ್ವಾ ತದ್ವಾ ಬೈದು ಅಡಿಯೋ ಬಿಡುಗಡೆ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಯೋಗರಾಜ್ ಭಟ್ ಇದೇ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋನ ತೀರ್ಪುಗಾರರಲ್ಲೊಬ್ಬರು. ಈ ಘಟನೆ ಬಳಿಕ ಯೋಗರಾಜ್ ಭಟ್ ಶೋನಿಂದ ಹೊರನಡೆಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.