Webdunia - Bharat's app for daily news and videos

Install App

ಎಲ್ಲಿದ್ದೆ ಇಲ್ಲಿತನಕ’ ಅಂದ ಸೃಜಾಗೆ ಅದ್ದೂರಿ ತಾರಾ ಬಳಗದ ಸಾಥ್!

Webdunia
ಗುರುವಾರ, 10 ಅಕ್ಟೋಬರ್ 2019 (18:36 IST)
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಎಲ್ಲಿದ್ದೆ ಇಲ್ಲಿತನಕ. ತೇಜಸ್ವಿ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 11ರಂದು ತೆರೆಗಾಣುತ್ತಿದೆ. ಈಗಾಗಲೇ ಮೋಹಕ ಹಾಡುಗಳು ಮತ್ತು ಪ್ರಾಮಿಸಿಂಗ್ ಟ್ರೇಲರ್ ಮೂಲಕ ಎಲ್ಲರನ್ನು ತಲುಪಿಕೊಂಡಿರೋ ಈ ಚಿತ್ರ ಬರೀ ಸೃಜನ್ ಲೋಕೇಶ್ ಪಾಲಿಗೆ ಮಾತ್ರವಲ್ಲದೇ, ಪ್ರೇಕ್ಷಕರಲ್ಲಿಯೂ ಸ್ಪೆಷಲ್ ಫೀಲ್ ಹುಟ್ಟಿಸ ಬಲ್ಲ ಸಿನಿಮಾ ಆಗಿತ್ತದೆಂಬ ನಂಬಿಕೆ ಚಿತ್ರತಂಡದಲ್ಲಿದೆ.
ಸೃಜನ್ ಲೋಕೇಶ್ ಇಲ್ಲಿ ಚಾಲೆಂಜಿಂಗ್ ಆದ ಪಾತ್ರವನ್ನು ಆರಿಸಿಕೊಂಡಿದ್ದಾರೆ. ಅವರಿಗೆ ಮಜಾ ಟಾಕೀಸ್ ಶೋವನ್ನು ಯಶಸ್ವಿಗೊಳಿಸಿದ್ದ ಒಂದಿಡೀ ತಂಡ ಸಾಥ್ ಕೊಟ್ಟಿದೆ. ಇದರ ನಿರ್ದೇಶಕ ತೇಜಸ್ವಿ ಕೂಡಾ ಹಲವಾರು ವರ್ಷಗಳಿಂದ ಸೃಜನ್ ಬಳಗದಲ್ಲಿರುವವರು. ಅವರಲ್ಲದೇ ಮಜಾ ಟಾಕೀಸ್ನ ತಾಂತ್ರಿಕ ವರ್ಗ ಸೇರಿದಂತೆ ಇಡೀ ತಂಡವೇ ಎಲ್ಲಿದ್ದೆ ಇಲ್ಲಿತನಕ ಚಿತ್ರಕ್ಕೆ ಸಾಥ್ ನೀಡಿದೆ. ಇದರ ಜೊತೆಗೇ ಘಟಾನುಘಟಿ ಕಲಾವಿದರೂ ಕೂಡಾ ಸೃಜನ್ ಲೋಕೇಶ್ಗೆ ಸಾಥ್ ಕೊಟ್ಟಿದ್ದಾರೆ. ಅದು ಎಲ್ಲಿದ್ದೆ ಇಲ್ಲಿತನಕ ಚಿತ್ರದ ನಿಜವಾದ ತಾಕತ್ತೆಂಬುದರಲ್ಲಿ ಎರಡು ಮಾತಿಲ್ಲ.
ನಿರ್ದೇಶಕ ತೇಜಸ್ವಿ ಈ ಸಿನಿಮಾದ ಪುಟ್ಟ ಪುಟ್ಟ ಪಾತ್ರಗಳನ್ನೂ ಮಹತ್ವ ನೀಡಿಯೇ ರೂಪಿಸಿದ್ದಾರಂತೆ. ಇಲ್ಲ ಸುಳಿದಾಡೋ ಸಣ್ಣ ಪಾತ್ರಗಳೂ ಕೂಡಾ ನೋಡುಗರನ್ನು ಕಾಡಲಿವೆ. ಇದರೊಂದಿಗೆ ಇಲ್ಲಿನ ಮಹತ್ವದ ಪಾತ್ರಗಳಿಗೆ ಪ್ರತಿಭಾವಂತ ಕಲಾವಿದರೇ ಜೀವ ತುಂಬಿದ್ದಾರೆ.

ಸಾಧು ಕೋಕಿಲಾ, ತಾರಾ, ಅವಿನಾಶ್, ಗಿರಿಜಾ ಲೋಕೇಶ್, ತರಂಗ ವಿಶ್ವ ಮುಂತಾದವರ ದಂಡೇ ಈ ಸಿನಿಮಾದಲ್ಲಿದೆ. ಅವರೆಲ್ಲರ ಪಾತ್ರಗಳೂ ಕೂಡಾ ಮಾಮೂಲು ಶೈಲಿಯದ್ದಲ್ಲ. ಅದೆಲ್ಲದರ ಅಸಲೀ ಮುದವೇನೆಂಬುದು ವಾರದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟಿಗನ ಜತೆ ಪ್ರೀತಿಯಲ್ಲಿ ಬಿದ್ರಾ ರಶ್ಮಿಕಾ ಮಂದಣ್ಣ, ಇದಕ್ಕೆ ಕಾರಣ ಈ ಫೋಟೋ

ಈಕೆಯಾ ಮಹಾಕುಂಭಮೇಳದ ವೈರಲ್ ಹುಡುಗಿ ಅನ್ನುವಷ್ಟರ ಮಟ್ಟಿಗೆ ಬದಲಾದ ಮೊನಲಿಸಾ, Video

Mysore Sandal Soap: ತಮನ್ನಾ ಭಾಟಿಯಾರನ್ನು ವಜಾಗೊಳಿಸುವಂತೆ ಹೆಚ್ಚಿದ ಒತ್ತಾಯ

Actor Darshan: ಪವಿತ್ರಾ ಗೌಡ ಹೊಸ ಸ್ಟೇಟಸ್ ಹಿಂದಿನ ಟಾರ್ಗೆಟ್ ಯಾರು

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ

ಮುಂದಿನ ಸುದ್ದಿ
Show comments