Select Your Language

Notifications

webdunia
webdunia
webdunia
webdunia

ಮಾಧ್ಯಮಗಳಿಗೆ ಯಶ್ ಸವಾಲು

ಮಾಧ್ಯಮಗಳಿಗೆ ಯಶ್ ಸವಾಲು
Bangalore , ಬುಧವಾರ, 19 ಅಕ್ಟೋಬರ್ 2016 (10:52 IST)
ಬೆಂಗಳೂರು: ಕನ್ನಡದ ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ. ಕಾವೇರಿ ಹೋರಾಟ ವಿಷಯದಲ್ಲಿ ತನ್ನ ನೈತಿಕತೆ ಪ್ರಶ್ನಿಸಿದ ಮಾಧ್ಯಮಗಳಿಗೆ ಚಾಟಿ ಬೀಸಿದ್ದಾರೆ.

ಹಿನ್ನೆಲೆಯಿಷ್ಟೇ. ಇತ್ತೀಚೆಗೆ ಕಾವೇರಿ ಹೋರಾಟದ ವಿಷಯದಲ್ಲಿ ಕಲಾವಿದರ ಜವಾಬ್ದಾರಿ ಕುರಿತು ನಟ ಯಶ್ ಅವರಲ್ಲಿ ಪ್ರಶ್ನಿಸಿದಾಗ, ಕೇವಲ ರೈತರ ಪರ ಚರ್ಚೆಯಲ್ಲಿ ಭಾಗವಹಿಸಿದ ಮಾತ್ರಕ್ಕೆ ರೈತರ ಕಾಳಜಿ ವಹಿಸಿದಂತಲ್ಲ ಎಂಬಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು ಮತ್ತು ಚಾನೆಲ್ ಯಶ್ ಅವರಿಗೆ ಚರ್ಚೆಯಲ್ಲಿ ಭಾಗವಹಿಸಲು ಬಹಿರಂಗ ಸವಾಲು ಹಾಕಿತ್ತು. ಇದಕ್ಕೆ ಉತ್ತರವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಯಶ್, ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡುವ ಮಾಧ್ಯಮಗಳು ಕಾವೇರಿ ರೈತರಿಗೆ ಎಷ್ಟು ಒಳ್ಳೆಯದು ಮಾಡಿದ್ದಾರೆ? ನಾನು ಒಬ್ಬ ಕಲಾವಿದನಾಗಿ, ಮಹದಾಯಿ ಇರಬಹುದು ಕಾವೇರಿ ಹೋರಾಟವಿರಬಹುದು ಪಾಲ್ಗೊಂಡಿದ್ದೇನೆ.

ಕೇವಲ ಟಿವಿಯಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯದು. ಒಂದು ವೇಳೆ ಯಾವುದೇ ಮಾಧ್ಯಮದವರು ರೈತರಿಗೆ ಉಪಯೋಗವಾಗುವಂತಹ, ಅವರ ಸಮಸ್ಯೆ ನಿವಾರಿಸುವಂತಹ ಕಾರ್ಯಕ್ರಮವಿದ್ದರೆ ಎಷ್ಟು ಸುದೀರ್ಘ ಎಪಿಸೋಡ್ ಆದರೂ ಸರಿಯೇ ಖಂಡಿತಾ ನಾನು ಭಾಗವಹಿಸುತ್ತೇನೆ.

ನನಗೆ ಸವಾಲು ಹಾಕಿದ ಮಾಧ್ಯಮಕ್ಕೆ ನನ್ನ ಸವಾಲು. ಕಾವೇರಿಗಾಗಿ ಬೆಂಕಿ ಉರಿಸಲು ನಮ್ಮ ಯುವಕರು ರೆಡಿ ಇದ್ದಾರೆಂದರೆ, ಅದೇ ಬೆಂಕಿಯಿಂದ ರೈತರ ಮನೆ ದೀಪ ಬೆಳಗುವ ಕೆಲಸ ಮಾಡಲು ನಾನು ತಯಾರಿದ್ನೆ” ಎಂದು ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ್ ಸುರಸುಂದರಾಂಗ