Select Your Language

Notifications

webdunia
webdunia
webdunia
Saturday, 5 April 2025
webdunia

ಧನರಾಜ್ ಬುಸ್ ಬುಸ್ ಜೋಕ್‍‍ಗೆ ಶಾಕ್‌ ಆದ ಯಮುನಾ

BigBoss Season11

Sampriya

ಬೆಂಗಳೂರು , ಭಾನುವಾರ, 6 ಅಕ್ಟೋಬರ್ 2024 (19:01 IST)
Photo Courtesy X
ಬೆಂಗಳೂರು: ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಯಾಗಿರುವ ಗಿಜ್ಜಿ ಗಿಲಿಗಿಲಿ ಶೋ ಮೂಲಕ ಖ್ಯಾತಿಗಳಿಸಿದ ಬ್ಲಾಗರ್ ಧನರಾಜ್ ಕಾಮಿಡಿಗೆ ನಟ ಕಿಚ್ಚ ಸುದೀಪ್ ಸೇರಿದಂತೆ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.

ಇಂದು ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ ಶೋ ನಲ್ಲಿ ಸುದೀಪ್ ಅವರು ಎಲ್ಲರನ್ನೂ ನಗಿಸುತ್ತಾ ತಮಾಷೆ ಮಾಡುತ್ತಾ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ ಧನರಾಜ್ ಅವರ ಬುಸ್ ಬುಸ್ ಜೋಕ್‌ಗೆ ಎಲ್ರೋ ಸುಸ್ತೋ ಸುಸ್ತಾಗಿದ್ದಾರೆ.

ಸುದೀಪ್ ಅವರು ಯಮುನಾ ಅವರನ್ನು ಯಾವ ಪ್ರಾಣಿಗೆ ಹೋಲಿಕೆ ಮಾಡುತ್ತೀರಾ ಎಂದು ಧನರಾಜ್ ಅವರಲ್ಲಿ ಕೇಳಿದ್ದಾರೆ.

ಹಾವು ಎಂದಾ ಧನರಾಜ್ ಅವರು ಬೆಳಿಗ್ಗೆ ಎದ್ದ ತಕ್ಷಣ ಹಾವು ಬುಸ್‌ ಬುಸ್ ಅನ್ನುತ್ತಿರುತ್ತದೆ. ಯಾರಾದರೂ ಹೋಗುತ್ತಿದ್ದರೆ ಅವರಿಗೆ ಅಡ್ಡ ಹಾಕುತ್ತದೆ.  ಒಮ್ಮೊಮ್ಮೆ ಅದರ ಪಾಡಿಗೆ ಇರುತ್ತದೆ. ಅದಕ್ಕೆ ಬೌಲ್‌ನಲ್ಲಿ ಹಾಲು ಕೊಟ್ರೇ ತನ್ನ ಪಾಡಿಗೆ ಕುಡಿಯುತ್ತಿರುತ್ತದೆ. ಹೀಗೇ ಹೇಳುವ ಮೂಲಕ ಯಮುನಾ ಅವರನ್ನು ಕಾಲೆಳೆದಿದ್ದಾರೆ. ಇದನ್ನು ಕೇಳಿದ ಮನೆ ಮಂದಿ ಹಾಗೂ ಕಿಚ್ಚ  ಬಿದ್ದು ಬಿದ್ದ ನಕ್ಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದವರಿಗೆ ಪ್ರಿಯಾಮಣಿ ಕೊಟ್ಟ ತಿರುಗೇಟು ಹೀಗಿದೆ