Webdunia - Bharat's app for daily news and videos

Install App

ಕೃಷ್ಣಂ ಪ್ರಿಯ ಸಖಿ ಈವೆಂಟ್ ನಲ್ಲಿ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ ಸಾಹಿತಿ ನಾಗೇಂದ್ರ ಪ್ರಸಾದ್

Krishnaveni K
ಬುಧವಾರ, 14 ಆಗಸ್ಟ್ 2024 (10:39 IST)
Photo Credit: Facebook
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಿಯ ಸಖಿ ಸಿನಿಮಾ ಈವೆಂಟ್ ನಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಆಕ್ರೋಶಗೊಂಡ ಘಟನೆ ನಡೆದಿದೆ. ಕೇಸ್ ಹಾಕುವುದಾಗಿಯೂ ವೇದಿಕೆಯಲ್ಲೇ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಎಫ್ ಎಂಗಳಲ್ಲಿ, ವಾಹಿನಿಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ. ಆದರೆ ಹಾಡು  ಪ್ರಸಾರ ಮಾಡುವಾಗ ಯಾವ ನಾಯಕ ನಟಿಸಿದ ಹಾಡು ಎಂದು ಮಾತ್ರ ಹೇಳಲಾಗುತ್ತಿದೆ. ಹಾಡು ಕೇಳುವಾಗ ಹಾಡುಗಾರ ಯಾರು ಎಂದೂ ಗೊತ್ತಾಗುತ್ತಿದೆ. ಆದರೆ ಸಂಗೀತ ಸಂಯೋಜಕರು ಮತ್ತು ಸಾಹಿತಿಗಳಿಗೆ ಕ್ರೆಡಿಟ್ ಕೊಡುತ್ತಿಲ್ಲ. ಇದು ನಾಗೇಂದ್ರ ಪ್ರಸಾದ್ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಕೃಷ್ಣಂ ಪ್ರಿಯ ಸಖಿ ಸಿನಿಮಾದ ದ್ವಾಪರ ಹಾಡು ಭಾರೀ ಹಿಟ್ ಆಗಿದೆ. ಈ ಹಾಡನ್ನು ಹಾಡಿದವರು ಜಸ್ಕರನ್ ಸಿಂಗ್ ಎಂದು ಎಲ್ಲಾ ಕಡೆ ಪ್ರಚಾರವಾಗಿದೆ. ಆದರೆ ಹಾಡನ್ನುಬರೆದವರು ಯಾರು ಮತ್ತು ಸಂಗೀತ ನಿರ್ದೇಶಕರು ಯಾರು ಎಂದು ಎಲ್ಲೂ ಹೇಳುತ್ತಿಲ್ಲ. ಇನ್ನು ಮುಂದೆ ಹಾಡು ಪ್ಲೇ ಮಾಡುವಾಗ ಸಾಹಿತಿ ಮತ್ತು ಸಂಗೀತ ಸಂಯೋಜಕರ ಹೆಸರನ್ನೂ ಹೇಳಲೇಬೇಕು. ಇಲ್ಲಾಂದ್ರೆ ಕೇಸ್ ಹಾಕ್ತೀವಿ ಎಂದಿದ್ದಾರೆ.

ಕೇಸ್ ಹಾಕಲು ಸರ್ಕಾರ ನಮಗೆ ಕಾನೂನಿನಲ್ಲಿ ಅವಕಾಶ ನೀಡಿದೆ. 3000 ಹಾಡುಗಳನ್ನು ಬರೆದ ನಾನು ಈ ಮಾತು ಹೇಳ್ತಿದ್ದೇನೆ. ಇದನ್ನು ನಾಯಕ ನಟ ಗಣೇಶ್ ಆಗಲೀ ಬೇರೆಯವರಾಗಲೀ ಅನ್ಯಥಾ ಭಾವಿಸಬಾರದು. ಆದರೆ ಹಾಡು ಬರೆದವರು, ಸಂಗೀತ ಸಂಯೋಜಿಸಿದವರಿಗೂ ಬೆಲೆ ಸಿಗಬೇಕು ಎಂದು ನಾಗೇಂದ್ರ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಒಟಿಟಿಯಲ್ಲಿ ರಿಲೀಸ್: ಆದ್ರೆ ಒಂದು ಟ್ವಿಸ್ಟ್ ಉಂಟು ಆಯ್ತಾ

ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಕೇವಲ 22 ದಿನ: ಚಿತ್ರತಂಡ ಮಾತ್ರ ಫುಲ್ ಸೈಲೆಂಟ್

ತನ್ನ ಮೇಲಿನ ಗಂಭೀರ ಆರೋಪಕ್ಕೆ ವೇದಿಕೆಯಲ್ಲಿ ಕೌಂಟರ್ ಕೊಟ್ಟ ಸಲ್ಮಾನ್‌ ಖಾನ್

ದೃಷ್ಟಿಬೊಟ್ಟು ಧಾರವಾಹಿ ಕೊನೆ: ವಿಜಯ್ ಸೂರ್ಯ ಬಗ್ಗೆ ಕೇಳಿಬರುತ್ತಿದೆ ಹೊಸ ಸುದ್ದಿ

2 ತಿಂಗಳ ಮಗು ಬಿಟ್ಟು ತೆಲುಗು ಬಿಗ್‌ಬಾಸ್‌ಗೆ ಕಾಲಿಟ್ಟ ಸಂಜನಾ ಗಲ್ರಾನಿ

ಮುಂದಿನ ಸುದ್ದಿ
Show comments