Select Your Language

Notifications

webdunia
webdunia
webdunia
webdunia

‘ಸುರೈ ಪೊಟ್ರು’ ಚಿತ್ರ ಒಟಿಟಿಯಲ್ಲಿ ವೀಕ್ಷಿಸಿದ ಅಭಿಮಾನಿಗಳು ದುಃಖಿಸಿದ್ದು ಯಾಕೆ ಗೊತ್ತಾ?

‘ಸುರೈ ಪೊಟ್ರು’ ಚಿತ್ರ ಒಟಿಟಿಯಲ್ಲಿ ವೀಕ್ಷಿಸಿದ ಅಭಿಮಾನಿಗಳು ದುಃಖಿಸಿದ್ದು ಯಾಕೆ ಗೊತ್ತಾ?
ಚೆನ್ನೈ , ಬುಧವಾರ, 18 ನವೆಂಬರ್ 2020 (10:35 IST)
ಚೆನ್ನೈ : ನಟ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಚಿತ್ರ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದು,  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸೂರ್ಯನ ಅಭಿಮಾನಿಗಳು ಮಾತ್ರ ಈ ವಿಚಾರಕ್ಕೆ ದುಃಖಿಸುತ್ತಿದ್ದಾರೆ ಎನ್ನಲಾಗಿದೆ.

ಹೌದು. ಈ ಚಿತ್ರವನ್ನು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದ್ದರೆ ಅತಿ ಹೆಚ್ಚು ಗಳಿಕೆ ಮಾಡುತ್ತಿತ್ತು. ಹಾಗಾಗಿ ಒಟಿಟಿಯಲ್ಲಿ ನೋಡಬೇಕಾದ ಬಗ್ಗೆ ಸೂರ್ಯ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೂರ್ಯ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ. ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ಖಂಡಿತವಾಗಿಯೂ ಇದು ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿರುತ್ತಿತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ.
ಹಾಗಾಗಿ ಮುಂದಿನ ತಿಂಗಳು ಈ ಚಿತ್ರವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಳ‍್ಳಲಾಗಿದೆ. ಚಿತ್ರಮಂದಿರದ ಮಾಲೀಕರು ಸಹ ಒಪ್ಪಿಗೆ ನೀಡಿದ್ದಾರೆ. ಆದಕಾರಣ ಸೂರ್ಯ ಅಭಿಮಾನಿಗಳಿಗೆ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವ ಅವಕಾಶ ಸಿಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರ ಜತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೈಕ್ ರೈಡಿಂಗ್