Webdunia - Bharat's app for daily news and videos

Install App

ಪುನೀತ್ ರಾಜ್ ಕುಮಾರ್ ತೀರಿಕೊಳ್ಳುವ ಹಿಂದಿನ ದಿನ ಪಾರ್ಟಿಯಿಂದ ಬೇಗ ಮನೆಗೆ ಬಂದಿದ್ದು ಇದೇ ಕಾರಣಕ್ಕೆ

Krishnaveni K
ಮಂಗಳವಾರ, 29 ಅಕ್ಟೋಬರ್ 2024 (12:17 IST)
Photo Credit: X
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀರಿಕೊಂಡು ಇಂದಿಗೆ ಮೂರು ವರ್ಷವಾಗಿದೆ. ಸದಾ ನಗುಮೊಗದ ಅಪ್ಪುವನ್ನು ಕರುನಾಡ ಜನ ಯಾವತ್ತೂ ಮರೆಯಲ್ಲ. ಅವರು ತೀರಿಕೊಳ್ಳುವ ಹಿಂದಿನ ರಾತ್ರಿ ಪಾರ್ಟಿ ಮಾಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತೇ ಇದ್ದ ಸಂಗತಿ.

ಪುನೀತ್ ತೀರಿಕೊಳ್ಳುವ ಹಿಂದಿನ ದಿನ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಬರ್ತ್ ಡೇ ಪಾರ್ಟಿಯಿತ್ತು. ಈ ಪಾರ್ಟಿಯಲ್ಲಿ ಚಿತ್ರರಂಗದ ಸ್ನೇಹಿತರೆಲ್ಲರೂ ಬಂದಿದ್ದರು. ಅವರ ಜೊತೆ ಪುನೀತ್ ಕೂಡಾ ಭಾಗಿಯಾಗಿದ್ದರು. ಹಾಡು, ಹರಟೆ ಹೊಡೆಯುತ್ತಾ ಜಾಲಿಯಾಗಿ ಕಾಲ ಕಳೆದಿದ್ದರು.

ಆದರೆ ಆ ದಿನ ಪಾರ್ಟಿಯಿಂದ ಪುನೀತ್ ಇತರರಿಗಿಂತ ಬೇಗ ಮನೆಗೆ ಹೊರಡಲು ಅವಸರ ಮಾಡಿದ್ದರು. ಯಾಕೆಂದರೆ ಪ್ರತಿನಿತ್ಯ ಊಟ ಮುಗಿಸಿದ ಬಳಿಕ ಮಗಳ ಜೊತೆ ಒಂದು ವಾಕಿಂಗ್ ಮಾಡುವುದು ಅಪ್ಪು ನಿತ್ಯದ ದಿನಚರಿಗಳಲ್ಲೊಂದಾಗಿತ್ತು. ಅಂದೂ ಕೂಡಾ ಮಗಳ ಜೊತೆ ವಾಕಿಂಗ್ ಮಾಡಬೇಕು ಎಂದು ಅಪ್ಪು ಬೇಗನೇ ಹೊರಟಿದ್ದರು.

ತಮ್ಮ ದೈನಂದಿನ ದಿನಚರಿ ಮಿಸ್ ಆಗಬಾರದು ಎಂದು ಅಪ್ಪು ಬೇಗ ಹೊರಟಿದ್ದರು. ತಮ್ಮ ಮಕ್ಕಳನ್ನು ಪುನೀತ್ ಅಷ್ಟು ಅಕ್ಕರೆ ಮಾಡುತ್ತಿದ್ದರು. ಹಿರಿಯ ಮಗಳು ಅಮೆರಿಕಾದಲ್ಲಿದ್ದ ಕಾರಣ, ಕಿರಿಯ ಮಗಳ ಜೊತೆ ಅಪ್ಪು ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಮರುದಿನವೇ ಅವರ ಕೊನೆಯ ದಿನ ಎಂದು ಯಾರೂ ಊಹೆ ಕೂಡಾ ಮಾಡಲು ಸಾಧ್ಯವಾಗಲಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ, ರಾಜ್ ಬಿ ಶೆಟ್ಟಿ ಕೊಟ್ರು ಅಪ್ ಡೇಟ್

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments