ಪ್ರಭಾಸ್ ರನ್ನು ‘ಡಾರ್ಲಿಂಗ್’ ಅಂತ ಕರೆಯೋದ್ಯಾಕೆ?

Webdunia
ಶನಿವಾರ, 16 ಡಿಸೆಂಬರ್ 2023 (14:02 IST)
Photo Courtesy: Twitter
ಹೈದರಾಬಾದ್: ನಟ ಪ್ರಭಾಸ್ ಅವರನ್ನು ಅಭಿಮಾನಿಗಳು, ಸಹಕಲಾವಿದರು ಪ್ರೀತಿಯಿಂದ ‘ಡಾರ್ಲಿಂಗ್’ ಎಂದು ಕರೆಯುತ್ತಾರೆ. ಅದು ಏಕೆ ಎಂದು ಸಲಾರ್ ಸಹ ನಟ ಪೃಥ್ವಿರಾಜ್ ಸುಕುಮಾರನ್ ಬಹಿರಂಗಪಡಿಸಿದ್ದಾರೆ.

ಸಲಾರ್ ಸಿನಿಮಾ ಪ್ರಮೋಷನ್ ವೇಳೆ ಮಾತನಾಡಿದ ಪೃಥ್ವಿರಾಜ್ ಸುಕುಮಾರನ್ ಟಾಲಿವುಡ್ ಸ್ಟಾರ್ ನಟನ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ. ಜೊತೆಗೆ ಅವರನ್ನು ಡಾರ್ಲಿಂಗ್ ಎಂದು ಕರೆಯುವುದರ ನಿಜ ಉದ್ದೇಶವೇನೆಂದು ಬಹಿರಂಗಪಡಿಸಿದ್ದಾರೆ.

ಪ್ರಭಾಸ್ ತಮ್ಮ ಜೊತೆಗಿರುವವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರ ಸುತ್ತಲಿನ ವಾತಾವರಣವನ್ನು ಲವಲವಿಕೆಯಿಂದಿಡುತ್ತಾರೆ. ತಮ್ಮ ಜೊತೆಗಿರುವವರು ಸರಿಯಾಗಿ ಊಟ, ತಿಂಡಿ ಮಾಡಿದ್ದಾರಾ ಎಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ. ಹೀಗಾಗಿಯೇ ಅವರನ್ನು ಎಲ್ಲರೂ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುತ್ತಾರೆ ಎಂದು ಪೃಥ್ವಿ ಹೇಳಿದ್ದಾರೆ.

ಸಲಾರ್ ಸಿನಿಮಾದಲ್ಲಿ ಪೃಥ್ವಿ ರಾಜ್ ವರದ ಎನ್ನುವ ಪಾತ್ರ ಮಾಡುತ್ತಿದ್ದಾರೆ. ದೇವ ಅಲಿಯಾಸ್ ಸಲಾರ್ ಆಗಿ ಪ್ರಭಾಸ್ ಕಾಣಿಸಿಕೊಳ‍್ಳುತ್ತಿದ್ದಾರೆ. ಸಲಾರ್ ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸುತ್ತೇನೆ ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಹಿಂದಿನ ದಿನ ಪಾಲಾಶ್ ಬೇರೊಬ್ಬಳೊಂದಿಗೆ ಸಿಕ್ಕಿಬಿದ್ದಿದ್ದ: ವಿದ್ಯಾನ್ ಮಾನೆ ಆರೋಪಕ್ಕೆ ಪಾಲಾಶ್ ತಿರುಗೇಟು

ಗಿಲ್ಲಿ ನಟನಿಗೆ ಹೇಳಿದಂತೇ 10 ಲಕ್ಷ ಕೊಟ್ಟೇ ಬಿಟ್ರು ಕಿಚ್ಚ ಸುದೀಪ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು

ಸ್ಮೃತಿ ಮಂಧಾನ ಮಾಜಿ ಗೆಳೆಯ ಪಾಲಾಶ್ ಮುಚ್ಚಲ್ ವಿರುದ್ಧ ಕೇಸ್ ದಾಖಲು

ಮುಂದಿನ ಸುದ್ದಿ
Show comments