Publish Date: Wed, 13 Apr 2022 (09:07 IST)
Updated Date: Wed, 13 Apr 2022 (09:07 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಕೇವಲ ಒಂದು ದಿನ ಬಾಕಿಯಿದೆ. ಆದರೆ ಇದುವರೆಗೆ ಕೇವಲ ಎರಡೇ ಹಾಡುಗಳನ್ನು ಹೊರಬಿಡಲಾಗಿದೆ.
ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೆ ಮೊದಲು ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಕೆಜಿಎಫ್ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿಲ್ಲ.
ಇದಕ್ಕೆ ಕಾರಣ ಕೆಲವು ಹಾಡುಗಳನ್ನು ಬಿಡುಗಡೆ ಮಾಡಿದರೆ ಸಿನಿಮಾ ಕತೆ ರಿವೀಲ್ ಆಗುತ್ತದೆ. ಈ ಕಾರಣಕ್ಕೆ ಮೊದಲೇ ಹಾಡುಗಳನ್ನು ಬಿಡುಗಡೆ ಮಾಡಲಾಗಿಲ್ಲ ಎಂಬ ಸುದ್ದಿ ಚಿತ್ರತಂಡದಿಂದ ಬಂದಿದೆ.