Webdunia - Bharat's app for daily news and videos

Install App

ನಟ ಪ್ರಕಾಶ್ ರೈ ರನ್ನು ತರಾಟೆಗೆ ತೆಗೆದುಕೊಂಡ ನಿರ್ದೇಶಕ ವಿನಯ್ ಕೃಷ್ಣ. ಕಾರಣವೇನು ಗೊತ್ತಾ…?

Webdunia
ಬುಧವಾರ, 11 ಏಪ್ರಿಲ್ 2018 (07:18 IST)
ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಚಿರಂಜೀವಿ ಸರ್ಜಾ ಅವರು ಅಭಿನಯಿಸಿರುವ ‘ ಸೀಜರ್’ ಚಿತ್ರದಲ್ಲಿ ಬರುವ ಡೈಲಾಗ್ ಒಂದರ ಬಗ್ಗೆ ಇತ್ತೀಚೆಗೆ ಸಾಕಷ್ಟು ಜನರು  ವಿರೋಧ ವ್ಯಕ್ತಡಿಸಿದ್ದರು. ಆದರೆ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ ನಟ ಪ್ರಕಾಶ್ ರೈ ಅವರು ಕೂಡ ಈ ಡೈಲಾಗ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಇದೀಗ ಚಿತ್ರದ ನಿರ್ದೇಶಕ ವಿನಯ ಕೃಷ್ಣ ಅವರು ಪ್ರಕಾಶ್ ರೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಈ ಚಿತ್ರದಲ್ಲಿ ರವಿಚಂದ್ರನ್‌ ಅವರು ಹೇಳುವ "ಗೋ ಹತ್ಯೆ ಮಾಡೋದು, ಹೆತ್ತ ತಾಯಿನಾ ತಲೆ ಹಿಡಿಯೋದು ಎರಡೂ ಒಂದೆ' ಎಂಬ ಸಂಭಾಷಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ನಟ ಪ್ರಕಾಶ್ ರೈ ಅವರು ಆ ಡೈಲಾಗ್ ತಪ್ಪಲ್ವಾ..? ನಾನ್ಸೆನ್ಸ್, ಡೈಲಾಗ್ ಬರೆದವರಿಗೆ ತಲೆ ಇಲ್ಲ. ನಾನು ಆ ದೃಶ್ಯದಲ್ಲಿ ಇಲ್ಲ, ಆದರೂ ತಕ್ಷಣ ನಿರ್ದೇಶಕರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದ್ದಾಗಿ ಹೇಳಿದ್ದರು.


ಈ ವಿಷಯದ ಬಗ್ಗೆ ಮಾತನಾಡಿರುವ ನಿರ್ದೇಶಕ ವಿನಯ್ ಕೃಷ್ಣ, `ಪ್ರಕಾಶ್ ರಾಜ್‌ ಅವರು ನನಗೆ ಫೋನ್ ಮಾಡಿಲ್ಲ ಮತ್ತು ಈ ವಿಷಯವಾಗಿ ನನ್ನ ಬಳಿ ಮಾತನಾಡಿಲ್ಲ. ಮುಖ್ಯವಾಗಿ ಈ ಸಂಭಾಷಣೆಗೂ ಅವರಿಗೂ ಸಂಬಂಧವಿಲ್ಲ. ಇದು ನಟ ರವಿಚಂದ್ರನ್ ಅವರು ಹೇಳುವ ಒಂದು ಸಂಭಾಷಣೆ. ಅವರೇ ಇಲ್ಲಿಯವರೆಗೂ ಈ ಬಗ್ಗೆ ಮಾತಾಡಿಲ್ಲ. ಹೀಗಿರುವಾಗ ಪ್ರಕಾಶ್ ರಾಜ್‌ ಅವರು ಈ ಸಂಭಾಷಣೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಇಷ್ಟಕ್ಕೂ ಈ ಸಂಭಾಷಣೆಯಲ್ಲಿ ತಪ್ಪೇನಿದೆ. ಇದು ಒಂದು ಸಂಭಾಷಣೆ ಅಷ್ಟೇ. ಈ ಸಂಭಾಷಣೆ ಇಟ್ಟುಕೊಂಡು ಇಡೀ ಚಿತ್ರದ ಬಗ್ಗೆ ತೀರ್ಮಾನ ಮಾಡೋದು ತಪ್ಪು' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

Indian Idol 12 winner ಪವನ್‌ದೀಪ್ ರಾಜನ್ ಸ್ಥಿತಿ ನೋಡಕ್ಕಾಗಲ್ಲ

Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

Sonu Nigam: ನನ್ನ ಈ ವಯಸ್ಸಿನಲ್ಲಿ ನನ್ನ ಮಗನ ವಯಸ್ಸಿನವನು ಬೆದರಿಸಿದರೆ ಸುಮ್ಮನಿರಬೇಕೇ: ಕನ್ನಡ ವಿವಾದಕ್ಕೆ ಸೋನು ನಿಗಂ ಉತ್ತರ

Sonu Nigam: ಸೋನು ನಿಗಂಗೆ ಬಿಗ್ ಶಾಕ್ ಕೊಟ್ಟ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಮುಂದಿನ ಸುದ್ದಿ
Show comments