Publish Date: Wed, 11 Apr 2018 (06:37 IST)
Updated Date: Wed, 11 Apr 2018 (06:40 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ 50ನೇ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಇನ್ನುಮುಂದೆ ಅವರು ಕಮರ್ಷಿಯಲ್ ಚಿತ್ರಗಳಿಗಿಂತ ಹೆಚ್ಚು ಪೌರಾಣಿಕ ಚಿತ್ರದಲ್ಲಿ ನಟಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ದರ್ಶನ್ ಅವರು ನಟಿಸಿದ್ದ ಕುರುಕ್ಷೇತ್ರ ಚಿತ್ರ ಅವರ 50ನೇ ಚಿತ್ರವಾಗಿದ್ದು, ಇದು ಪೌರಾಣಿಕ ಸಿನಿಮಾವಾಗಿರುವುದು ಅವರಿಗೆ ತುಂಬಾ ಖುಷಿ ನೀಡಿದೆಯಂತೆ. ಆದ ಕಾರಣ ಇನ್ನು ಮುಂದೆ ಅವರು ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ಮೊದಲ ಆದ್ಯತೆ ನೀಡುತ್ತಾರಂತೆ. ಯಾವುದೇ ಕಮರ್ಷಿಯಲ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದರೂ ಕೂಡ ಪೌರಾಣಿಕ ಪಾತ್ರದ ಸಿನಿಮಾದ ಆಫರ್ ಬಂದರೆ ಬೇರೆ ಚಿತ್ರಗಳನ್ನೂ ಕ್ಯಾನ್ಸಲ್ ಮಾಡಿಕೊಳ್ಳಲು ತಯಾರಾಗಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ನಟ ದರ್ಶನ್ ಅವರು,’ ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆದ್ಯತೆ ನೀಡುತ್ತೇನೆ. ಅದಕ್ಕಾಗಿ ಕಮರ್ಷಿಯಲ್ ಚಿತ್ರಗಳನ್ನ ಪಕ್ಕಕ್ಕೆ ಇಡುತ್ತೇನೆ ಎಂದು ತಿಳಿಸಿದ್ದಾರೆ. ಹಾಗೇ ಕನ್ನಡ ಸಿನಿಮಾರಂಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳನ್ನ ನಿರ್ಮಾಣ ಮಾಡುವವರು ತುಂಬಾ ಕಡಿಮೆ. ಇಂತಹ ಚಿತ್ರ ಮಾಡ್ತಿನಿ ಅಂತ ಬರುವವರೇ ಕಡಿಮೆ ಆದ್ದರಿಂದ ಅಂತಹ ಅವಕಾಶ ಸಿಕ್ಕಾಗ ಕಂಡಿತ ಬಿಡುವುದಿಲ್ಲ ಎಂಬುದಾಗಿ ದರ್ಶನ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ