Select Your Language

Notifications

webdunia
webdunia
webdunia
webdunia

ಜಾಮೀನಿನ ಮೇಲೆ ಬಿಡುಗಡೆಗೊಂಡ ನಟ ಕಿರಣ್ ರಾಜ್

ಬೆಂಗಳೂರು
ಬೆಂಗಳೂರು : ಕಿನ್ನರಿ ಧಾರಾವಾಹಿಯ ನಟ ಕಿರಣ್ ರಾಜ್ ಅವರು ಮಾಡೆಲ್ ಒಬ್ಬರಿಗೆ ವಂಚಿಸಿ ಹಾಗೂ ಹಲ್ಲೆ ಮಾಡಿದ ಕಾರಣ ಈಗಾಗಲೇ ಜೈಲು ಸೇರಿದ್ದು, ಇದೀಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


ಮುಂಬೈ ಮೂಲದ ಮಾಡೆಲ್ ಒಬ್ಬರು ಕಿರಣ್ ರಾಜ್ ತನ್ನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದು, ಈಗ ಮದುವೆಯಾಗುವುದಿಲ್ಲ ಎಂದು  ವಂಚನೆ ಮಾಡಿದ್ದಲ್ಲದೆ ತನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಆಕೆ ಕಿರಣ್ ವಿರುದ್ಧ ದೂರು ದಾಖಲಿಸಿದ್ದರು. ಆದ್ದರಿಂದ ನಟ ಕಿರಣ್ ರಾಜ್ ಅವರನ್ನು ರಾಜರಾಜೇಶ್ವರಿ ನಗರದ ಪೊಲೀಸರು ಬಂಧಿಸಿದ್ದರು.
ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ಕಿರಣ್ ರಾಜ್ ಅವರನ್ನು ರಾಜರಾಜೇಶ್ವರಿ ನಗರದ ಪೊಲೀಸರು ಸೋಮವಾರ  ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಕಿರಣ್ ರಾಜ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ ಪರ ನಿಂತ ತಮಿಳು ನಟ ಸಿಂಬು!