Select Your Language

Notifications

webdunia
webdunia
webdunia
webdunia

ಟ್ರೋಲ್ ಮಾಡುವವರ ವಿರುದ್ದ ಡಾ.ರಾಜ್ ಕುಮಾರ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಯಾಕೆ ಗೊತ್ತಾ...?

ಟ್ರೋಲ್ ಮಾಡುವವರ ವಿರುದ್ದ ಡಾ.ರಾಜ್ ಕುಮಾರ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಯಾಕೆ ಗೊತ್ತಾ...?
ಬೆಂಗಳೂರು , ಶುಕ್ರವಾರ, 30 ಮಾರ್ಚ್ 2018 (10:33 IST)
ಬೆಂಗಳೂರು : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಕೆಲವರಿಗೆ ಒಂದು ಅಭ್ಯಾಸವಾಗಿ ಬಿಟ್ಟಿದೆ. ಇಂಥವರಿಗೆ ಮಾಡಲು ಏನು ಕೆಲಸವಿಲ್ಲದಿದ್ದಾಗ ಬೇರೆಯವರ ಕಾಲೆಯುವುದರ ಮೂಲಕ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಜನರ ಆಕ್ರೋಶಕ್ಕೆ ಗುರಿಯಾಗುತ್ತೆ ಎಂಬುದಕ್ಕೆ ನಿದರ್ಶನ ಇಲ್ಲಿದೆ.


ಇತ್ತಿಚೆಗೆ ಡಾ. ರಾಜ್‌‌ಕುಮಾರ್‌‌‌‌‌‌‌‌‌‌‌ ಹಾಗೂ ಅವರ ಕುಟುಂಬದ ಸದಸ್ಯರ ಬಗ್ಗೆ ಫೇಸ್ ಬುಕ್  ನಲ್ಲಿ ಅಸಭ್ಯವಾಗಿ ಟ್ರೋಲ್ ಮಾಡಲಾಗಿದ್ದು, ಇದು ಅವರ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತಹ ಟ್ರೋಲ್ ಆಗಿದ್ದರಿಂದ ಅವರ ಅಭಿಮಾನಿಗಳು ಕೋಪಗೊಂಡು ಟ್ರೋಲ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಅಭಿಮಾನಿಗಳೆಲ್ಲಾ ಸೇರಿ ಮಾಗಡಿ ರೋಡ್ ಪೋಲಿಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರನ್ನು ಪತ್ತೆ ಹಚ್ಚಿ ಅವರಿಗೆ ಸರಿಯಾಗಿ ಬುದ್ದಿ ಹೇಳಬೇಕೆಂದು ಕೋರಿ ದೂರು ದಾಖಲಿಸಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೈಗರ್ ಶ್ರಾಫ್ ಬಗ್ಗೆ ದಿಶಾ ಪಠಾನಿ ಹೇಳಿದ್ದೇನು…?