Select Your Language

Notifications

webdunia
webdunia
webdunia
webdunia

ನಟಿ ಭಾವನಾ ಮೆನನ್ ಅವರು ಟಗರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಕಾರಣ ಇಲ್ಲಿದೆ ನೋಡಿ!

ನಟಿ ಭಾವನಾ ಮೆನನ್ ಅವರು ಟಗರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಕಾರಣ ಇಲ್ಲಿದೆ ನೋಡಿ!
ಬೆಂಗಳೂರು , ಶುಕ್ರವಾರ, 9 ಮಾರ್ಚ್ 2018 (06:32 IST)
ಬೆಂಗಳೂರು :ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ ‘ಟಗರು’ ಚಿತ್ರ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತಿದೆ. ಈ ಹಿನ್ನಲೆಯಲ್ಲಿ ಚಿತ್ರದ ನಟಿ ಭಾವನಾ ಮೆನನ್ ಅವರು ತುಂಬಾ ಸಂತೋಷಗೊಂಡಿದ್ದು, ತಾವು ಈ ಚಿತ್ರದಲ್ಲಿ ನಟಿಸಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ.


ಭಾವನಾ ಮೆನನ್ ಅವರು ಈ ಚಿತ್ರದಲ್ಲಿ ಪಂಚಮಿ ಎಂಬ  ಪಾತ್ರದಲ್ಲಿ ಅಭಿನಯಿಸಿದ್ದು, ತಾವು ಈ ಚಿತ್ರದಲ್ಲಿ ನಟಿಸಲು ಕಾರಣವೆನೆಂಬುದನ್ನು ಬಿಚ್ಚಿಟ್ಟಿದ್ದಾರೆ. ’ ಶಿವರಾಜಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ಈ ಹಿಂದೆ ಬಂದಿತ್ತು. ಆದರೆ, ಒಂದಲ್ಲ ಒಂದು ಕಾರಣಕ್ಕೆ ತಪ್ಪಿ ಹೋಗುತ್ತಿತ್ತು. `ಟಗರು' ಚಿತ್ರದಲ್ಲಿ ನಟಿಸುವುದಕ್ಕೆ ಸೂರಿ ಫೋನ್‌ ಮಾಡಿದ್ದಾಗ, ಏಳೆಂಟು ದಿನಗಳ ಅತಿಥಿ ಪಾತ್ರ ಎಂದಿದ್ದರು. ಅಷ್ಟೇ ಅಲ್ಲ, ಈ ಪಾತ್ರವನ್ನು ನೀವೇ ಮಾಡಬೇಕು ಎಂದು ಹೇಳಿದ್ದರು. ನನಗೆ ನೋ ಅನ್ನೋಕೆ ಇಷ್ಟವಿರಲಿಲ್ಲ. ಏಕೆಂದರೆ, ಕನ್ನಡಕ್ಕೆ `ಜಾಕಿ' ಮೂಲಕ ನನ್ನನ್ನು ಪರಿಚಯಿಸಿದ್ದು ಸೂರಿ. ನನಗೆ ಅವರ ಜೊತೆಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ. ಹಾಗಾಗಿ ಒಪ್ಪಿದೆ. ಏಳೆಂಟು ದಿನದ ಪಾತ್ರವು ಕೊನೆಗೆ 15 ದಿನಗಳವರೆಗೂ ಮುಂದುವರೆಯಿತು' ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬರು ಹೀಗ್ಯಾಕೆ ಉಪವಾಸ ಮಾಡ್ತಿರೋದು?