Publish Date: Wed, 01 Aug 2018 (14:52 IST)
Updated Date: Wed, 01 Aug 2018 (14:54 IST)
ಬೆಂಗಳೂರು : ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಸ್ಟಾರ್ ಎನಿಸಿಕೊಳ್ಳಬೇಕು ಎಂದು ಕೆಲವು ನಟರು ಹಾತೋರೆಯುತ್ತಿದ್ದರೆ 'ಅಕಿರಾ' ಖ್ಯಾತಿಯ ನಟ ಅನಿಶ್ ತೇಜೇಶ್ವರ್ ಮಾತ್ರ ಸ್ಟಾರ್ ಪಟ್ಟ ನೀಡಿದ್ದಕ್ಕೆ ಬೇಸರಗೊಂಡಿದ್ದಾರಂತೆ.
ಹೌದು 'ನಮ್ ಏರಿಯಾಲ್ ಒಂದಿನ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದ್ದ ಅನಿಶ್ ಇಲ್ಲಿಯವರೆಗೂ ಏಳು ಸಿನಿಮಾ ಮಾಡಿದ್ದಾರೆ. ಇವರು ಕೂಡ ಸ್ಯಾಂಡಲ್ ವುಡ್ ಒಬ್ಬ ಪ್ರತಿಭಾನ್ವಿತ ನಟ. ಇದೀಗ ಇವರು 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಿಂದ ಮತ್ತೆ ಅಬ್ಬರವಿಡಲು ಸಿದ್ಧವಾಗಿದ್ದಾರೆ.
ಆದರೆ ಅಕಿರಾ ಚಿತ್ರದಲ್ಲಿ ನಟಿಸಿದ ನಂತರ ಅನಿಶ್ ತೇಜೇಶ್ವರ್ ಅವರನ್ನ ಅಭಿಮಾನಿಗಳು 'ಸುಪ್ರೀಂ ಸ್ಟಾರ್' ಎಂದು ಕರೆಯುತ್ತಾರೆ. ಆದರೆ ಅನಿಶ್ ಮಾತ್ರ ಈ ಬಗ್ಗೆ ಬೇಸರಗೊಂಡಿದ್ದಾರೆ. ''ನಾನು ಇನ್ನು ಏಳು ಸಿನಿಮಾ ಮಾಡಿರುವ ಹೊಸಬ. ನಾನು ಯಾವ ಸ್ಟಾರ್ ಅಲ್ಲ. ಈ ‘ಸುಪ್ರೀಂ ಸ್ಟಾರ್’ ಎಂದು ಕೇಳಿದಾಗಲೆಲ್ಲ ನನಗೆ ಕಿರಿಕಿರಿ ಎನಿಸುತ್ತೆ. ನಾನಿನ್ನೂ ಪ್ರೂವ್ ಮಾಡೇ ಇಲ್ಲ” ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ