Publish Date: Sun, 26 Jul 2020 (15:52 IST)
Updated Date: Sun, 26 Jul 2020 (15:54 IST)
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್.ರಹಮಾನ್ ವಿರುದ್ಧ ಬಾಲಿವುಡ್ ನಲ್ಲಿ ಗ್ಯಾಂಗ್ ಒಂದು ಕೆಲಸ ಮಾಡುತ್ತಿದೆ.
ಎ.ಆರ್. ರಹಮಾನ್ ನಿಸ್ಸಂದೇಹವಾಗಿ ಅಪ್ರತಿಮ ಸಂಗೀತ ಸಂಯೋಜಕರಾಗಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ಜನಪ್ರಿಯ ರೇಡಿಯೊ ಚಾನೆಲ್ ವೊಂದರ ಸಂದರ್ಶನವೊಂದರಲ್ಲಿ, ಬಾಲಿವುಡ್‌ನಲ್ಲಿ ನನ್ನ ಕೆಲಸಕ್ಕೆ ಅಡ್ಡಿಯುಂಟುಮಾಡುವ ಇಡೀ ಗ್ಯಾಂಗ್ ನನಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಹಮಾನ್ ಬಹಿರಂಗಪಡಿಸಿದ್ದಾರೆ.
ಆ ಗ್ಯಾಂಗ್ ನ ಕೈವಾಡದಿಂದಾಗಿ ಬಹಳಷ್ಟು ಸಿನಿಮಾಗಳ ಆಫರ್ ಗಳು ಕೈತಪ್ಪುತ್ತಿವೆ ಎಂದು ಹೇಳಿಕೊಂಡಿದ್ದಾರೆ.