Webdunia - Bharat's app for daily news and videos

Install App

‘ ದಿ ವಿಲನ್’ ಸಿನಿಮಾದ ರಿಲೀಸ್ ಯಾವಾಗ ಗೊತ್ತಾ….?

Webdunia
ಶುಕ್ರವಾರ, 4 ಮೇ 2018 (06:36 IST)
ಬೆಂಗಳೂರು : ಸ್ಯಾಂಡಲ್ ವುಡ್ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷೆಯ  ‘ದಿ ವಿಲನ್’ ಸಿನಿಮಾವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೊಂದು ಸಂತಸದ ವಿಷಯವೆನೆಂದರೆ ಈ ಸಿನಿಮಾ ರಿಲೀಸ್ ಮಾಡಲು ದಿನ ನಿಗದಿಯಾಗಿದೆ.


ಹೌದು. ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರ ಒಂದೊಂದು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಸಾಂಗ್ ಶೂಟಿಂಗ್ ಪೂರ್ಣಗೊಳಿಸಿ ಟೀಸರ್ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ. ಹಾಗೇ ಬಾಕಿ ಉಳಿದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 'ದಿ ವಿಲನ್' ರಿಲೀಸ್ ಮಾಡಲು ನಿರ್ದೇಶಕ ಪ್ರೇಮ್ ನಿರ್ಧರಿಸಿದ್ದಾರಂತೆ.


ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಸುದೀಪ್, ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿ ಹಲವರು ನಟಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments